ಏಷ್ಯದ ರಾಷ್ಟ್ರಗಳನ್ನು ಮತ್ತು ಅಮೆರಿಕ ಒಕ್ಕೂಟವನ್ನು ಬೆದರಿಸಬಹುದಾದಂತಹ ಗುಪ್ತ ಭೂಗತ ಜಲಂತಾರ್ಗಾಮಿ ಪರಮಾಣು ನೆಲೆಯನ್ನು ಚೀನ ಸ್ಥಾಪಿಸಿದೆ ಎಂದು ಬ್ರಿಟಿಷ್ ಮಾಧ್ಯಮಗಳು ಶುಕ್ರವಾರ ವರದಿಮಾಡಿವೆ.
ದಿ ಡೇಲಿ ಟೆಲಿಗ್ರಾಫ್ ಪತ್ರಿಕೆಗೆ ಲಭಿಸಿರುವ ಉಪಗ್ರಹ ಚಿತ್ರಗಳು ಖಂಡಾಂತರ ಕ್ಷಿಪಣಿಗಳನ್ನು ಸಂಗ್ರಹಿಸಿಡುವಂತಹ ಜಲಾಂತರ್ಗಾಮಿ ಮತ್ತು ಯುದ್ಧವಿಮಾನಗಳ ನಿಲುಗಡೆಗೆ ಅವಕಾಶವಿರುವಂತಹ ನೆಲೆಗಳನ್ನು ತೋರಿಸುತ್ತದೆ ಎನ್ನಲಾಗಿದೆ.
ದಿ ಡೇಲಿ ಪತ್ರಿಕೆಯ ವರದಿಯ ಪ್ರಕಾರ ಚೀನ ಅತ್ಯಾಧುನಿಕ ಪರಮಾಣು ನೌಕೆಯನ್ನು ತನ್ನ ನೆರೆಯ ರಾಷ್ಟ್ರಗಳಿಂದ ಕೇವಲ 500 ಕಿ.ಮೀ. ದೂರದಲ್ಲಿ ಸ್ಥಾಪಿಸಿದೆ. ಮತ್ತೊಂದು ಛಾಯಾಚಿತ್ರದ ಪ್ರಕಾರ ದಕ್ಷಿಣ ಭಾಗಕ್ಕೆ ಸೇರಿದ ಹೆನಿನ್ ದ್ವೀಪದ ಬಳಿ ಇರುವ ಸನ್ಯದ ಸುರಂಗಮಾರ್ಗದ ಬಳಿ ಸ್ಥಾಪಿಸಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಸೇನೆ ಪತ್ರಿಕೆಯ ವಿಶ್ಲೇಷಕರು ಚೀನಾ ಸ್ಥಾಪಿಸಿರುವ ಈ ಅಂತರ್ಜಲ ಅಣು ವಿದ್ಯುತ್ ಸ್ಥಾವರವು ಯುದ್ಧಕಾರ್ಯಕ್ಕಾಗಿ ಮತ್ತು ದೇಶದ ರಕ್ಷಣಾ ಕಾರ್ಯಕ್ಕಾಗಿ ಬಳಸಬಹುದು ಎಂದು ಹೇಳಿದ್ದಾರೆ.
|