ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ ಸರಕಾರ ರಚನೆಯಲ್ಲಿ ಯೆಚೂರಿಗೆ ಪಾತ್ರ
ಮಾವೋವಾದಿಗಳ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆ ಹಿನ್ನೆಲೆಯಲ್ಲಿ ಹಿರಿಯ ರಾಜಕೀಯ ನಾಯಕರ ಜತೆ ಸಂಧಾನ ಮಾತುಕತೆ ನಡೆಸುವ ಅಂಗವಾಗಿ ಸಿಪಿಐಎಂನ ಹಿರಿಯ ನಾಯಕ ಸೀತಾರಾಮ್ ಯೆಚೂರಿ ಅವರು ನೇಪಾಳಕ್ಕೆ ಆಗಮಿಸಿದ್ದಾರೆ.

ಏಪ್ರಿಲ್ 10ರಂದು ನಡೆದ ಸಂವಿಧಾನ ಸಭೆ ಚುನಾವಣೆ ಬಳಿಕ ರಾಜಕೀಯ ಸಂದಿಗ್ದತೆ ಸೃಷ್ಟಿಯಾಗಿರುವ ಬೆನ್ನಲ್ಲಿಯೇ ಯೆಚೂರಿ ಅವರು ನೇಪಾಳ ಪ್ರವಾಸ ಕೈಗೊಂಡಿರುವುದು ಮಹತ್ವ ಪಡೆದಿದೆ.

ತಮ್ಮ ನೇಪಾಳ ಪ್ರವಾಸದ ವೇಳೆ ಯೆಚೂರಿ ಅವರು ಪ್ರಧಾನಿ ಗಿರಿಜಾಪ್ರಸಾದ್ ಕೊಯಿರಾಲ, ಮಾವೋ ನಾಯಕ ಪ್ರಚಂಡ, ಸಿಪಿಎನ್-ಯುಎಂಎಲ್ ನಾಯಕ ಮಾಧವ ಕುಮಾರ್ ನೇಪಾಳ್ ಹಾಗೂ ಇತರ ಹಿರಿಯ ರಾಜಕೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ.

ನೇಪಾಳದಲ್ಲಿ ನೂತನ ಸರಕಾರ ರಚನೆ ವಿಚಾರದಲ್ಲಿ ಮಾವೋವಾದಿಗಳು ಇತರ ಪ್ರಮುಖ ಪಕ್ಷಗಳಾದ ನೇಪಾಳಿ ಕಾಂಗ್ರೆಸ್ ಹಾಗೂ ಸಿಪಿಎನ್-ಯುಎಂಎಲ್ ನಡುವಣ ಭಿನ್ನಾಭಿಪ್ರಾಯವನ್ನು ಬಗೆಹರಿಸುವ ನಿಟ್ಟಿನಲ್ಲಿ ಯೆಚೂರಿ ನೇಪಾಳಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

601ಸದಸ್ಯ ಬಲದ ಸಂವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ 220 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಮಾವೋವಾದಿಗಳು ಪ್ರಚಂಡ ನೇತೃತ್ವದಲ್ಲಿ ನೂತನ ಸರಕಾರ ಸಂಬಂಧ ಮಾತುಕತೆ ನಡೆಯುತ್ತಿದೆ.
ಮತ್ತಷ್ಟು
ಚೀನಾದಿಂದ ಗುಪ್ತ ಪರಮಾಣು ಜಲಂತಾರ್ಗಾಮಿ ನೆಲೆ
ಕ್ಲಿಂಟನನ್ ಹೇಳಿಕೆ ವಿರುದ್ದ ಇರಾನ್ ವಿ. ಸಂಗೆ ದೂರು
ಶಾಶ್ವತ ಪರಿಹಾರ ಬೇಕು: ರೈಸ್
ಮಾನ್ಮಾರ್ ವಿರುದ್ಧ ಅಮೆರಿಕದ ದಿಗ್ಬಂಧನ ಮುಂದುವರಿಕೆ
ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸೌಕರ್ಯ ಅಡ್ಡಿ: ಅಮೆರಿಕ
ಅಮೆರಿಕ-ಭಾರತ ಭಾವೀ ಸರಕಾರಗಳಿಂದ ಅಣುಬಂಧ ಜಾರಿ