ಭಾರತದಲ್ಲಿರುವ ಮಧ್ಯಮ ವರ್ಗವು ಹೆಚ್ಚು ಆಹಾರಕ್ಕೆ ಬೇಡಿಕೆ ಉಂಟುಮಾಡುತ್ತಿರುವುದರಿಂದ, ಜಾಗತಿಕವಾಗಿ ಆಹಾರೋತ್ಪಾದನೆಗಳ ಬೆಲೆ ಏರಿಕೆಯಾಗುತ್ತಿದೆ ಮತ್ತು ಇದು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಅಮೆರಿಕಾದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹೇಳಿದ್ದಾರೆ.ಶುಕ್ರವಾರ ಅಮೆರಿಕಾದ ಮಿಸ್ಸೋರಿಯ ಮೆರಿಲ್ಯಾಂಡ್ ಹೈಟ್ಸ್‌ನಲ್ಲಿ ವರ್ಲ್ ವೈಡ್ ಟೆಕ್ನಾಲಾಜಿ ಇಂಕ್ ಎನ್ನುವ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿ, ಭಾರತದಲ್ಲಿ ಮಧ್ಯಮ ವರ್ಗವು ಪ್ರವರ್ಧಮಾನಕ್ಕೆ ಬರುತ್ತಿದೆ. ಇದರಿಂದಾಗಿ ಅವಕಾಶಗಳು ಹೆಚ್ಚಿದೆ. ಇದು ಆಹಾರೋತ್ಪನ್ನಗಳಿಗೆ ಹೆಚ್ಚು ಬೇಡಿಕೆಯನ್ನು ಉಂಟುಮಾಡುವ ಜೊತೆಗೆ ಬೆಲೆ