ವಾಶಿಂಗ್ಟನ್: ಚೀನ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಅಮೆರಿಕದ ಪ್ರಜೆಯೊಬ್ಬನಿಗೆ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿರುವುದಾಗಿ ನ್ಯಾಯಾಂಗ ಇಲಾಖೆ ಹೇಳಿದೆ.
ಥಾಯ್ ಶೆನ್ ಕುವೊ ಎಂಬ 58ರ ಹರೆಯದ ವ್ಯಕ್ತಿ ವಿರುದ್ಧ ರಾಷ್ಟ್ರದ ರಕ್ಷಣಾ ಮಾಹಿತಿಯನ್ನು ವಿದೇಶಿ ಸರಕಾರಕ್ಕೆ ನೀಡುವ ಸಂಚಿನಲ್ಲಿ ಬಾಗಿಯಾಗಿರುವ ಕುರಿತು ಕಳೆದ ಮೇ ತಿಂಗಳಲ್ಲಿ ಆರೋಪಿಸಲಾಗಿದೆ.
ಕುವೊ ಥೈವಾನ್‌ಗೆ ಅಮೆರಿಕದಿಂದ ಶಸ್ತ್ರಾಸ್ತ್ರಗಳ ಮಾರಾಟದ ವಿವರಗಳು ಮತ್ತು ಅಮೆರಿಕದ ಇತರ ಸೇನಾ ರಹಸ್ಯ ಸಂಪರ್ಕಗಳನ್ನು ಮಾರ್ಚ್ 2007ರಿಂದ ಕಳೆದ ಫೆಬ್ರವರಿಯಲ್ಲಿ ಆತ ಬಂಧನಕ್ಕೀಡಾಡುಗುವ ತನಕ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ನ್ಯೂ ಆರ್ಲಿಯನ್ಸ್, ಲೌಸಿಯಾನಾದಲ್ಲಿ ಪೀಠೋಪಕರಣಗಳ ವ್ಯಾಪಾರಿಯಾಗಿರುವ ಕುವೊನಿಗೆ ವರ್ಜೀನಿಯಾದ ಫೆಡರಲ್ ಕೋರ್ಟ್ 188 ತಿಂಗಳುಗಳ ಶಿಕ್ಷೆ ಹಾಗೂ 40 ಸಾವಿರ ಡಾಲರ್ ದಂಡ ವಿಧಿಸಿದೆ.
ಈತನಿಗೆ ವರ್ಗೀಕೃತ ಮಾಹಿತಿಗಳನ್ನು ನೀಡಿರುವ ಶಸ್ತ್ರಾಸ್ತ್ರ ವಿಭಾಗದ ವಿಶ್ಲೇಷಕ ಗ್ರೆಗ್ ಬರ್ಗರ್‌ಸನ್‌ಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 57 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
|