ಲಾಸ್‌ವೇಗಸ್: ಶುಕ್ರವಾರ ಕಿಕ್ಕಿರಿದು ತುಂಬಿರುವ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಪದವಿ ಅಭ್ಯರ್ಥಿತನದ ಆಕಾಂಕ್ಷಿಯಾಗಿದ್ದ ಹಿಲರಿ ರೋಧಾಮ್ ಕ್ಲಿಂಟನ್ ಅವರು, ಬರಾಕ್ ಒಬಾಮ ಅವರ ಗೆಲುವನ್ನು ಬಯಸಿರುವುದಾಗಿ ಹೇಳಿದ್ದಾರೆ. ಅಲ್ಲದೆ ತನ್ನ ಬೆಂಬಲಿಗರು ಒಬಾಮರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಸೆನೆಟರ್ ಮೆಕ್‌ಕೆಯ್ನ್ ಬದಲಿಗೆ ತನ್ನ ಬೆಂಬಲಿಗರು ಸೆನೆಟರ್ ಒಬಾಮರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ. ಅವರು ಹಂಡರ್ಸನ್ ಹೊರವಲಯದ ಲಾಸ್ ವೇಗಸ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಇತ್ತೀಚೆಗೆ ಡೆಮಾಕ್ರೆಟ್‌ಗಳಿಗೆ ಶ್ವೇತಭವನ ತಲುಪುವುದು ಕಷ್ಟವಾಗುತ್ತಿದೆ ಎಂದು ನುಡಿದ ಹಿಲರಿ ನವೆಂಬರ್ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಒಬಾಮ ಅವರನ್ನು ಶ್ವೇತಭವನಕ್ಕೆ ತಲುಪಿಸಬೇಕು ಎಂದು ಹೇಳಿದ್ದಾರೆ.
ಹಿಲರಿ ಅವರ ಮೇಲೆ ಇಂದಿಗೂ ಅದೇ ಗೌರವ ಇರುವುದಾಗಿ ಅವರ ಬೆಂಬಲಿಗರು ಇದೇ ವೇಳೆ ತಿಳಿಸಿದ್ದಾರೆ.
|