ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮಾನವೀಯ ಸಹಕಾರಕ್ಕೆ ಮೆಡ್ವೆಡೇವ್ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾನವೀಯ ಸಹಕಾರಕ್ಕೆ ಮೆಡ್ವೆಡೇವ್ ಆದೇಶ
ಜಾರ್ಜಿಯಾ ಮತ್ತು ದಕ್ಷಿಣ ಒಸ್ಸೆಟಿಯಾ ನಡುವಿನ ಸಂಘರ್ಷದಿಂದಾಗಿ ಹಾನಿಗೊಳಗಾದ ಜನತೆಗೆ ಮಾನವೀಯ ಸಹಕಾರ ನೀಡುವಂತೆ ರಶ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಆದೇಶ ನೀಡಿದ್ದಾರೆ.

ನೊಂದವರಿಗೆ ಸಹಾಯ ನೀಡುವಂತೆ, ಪ್ರಧಾನಿ ವ್ಲಾಡಿಮಿರ್ ಪುಟಿನ್, ತುರ್ತಿಪರಿಸ್ಥಿತಿ ಸಚಿವ ಸೆರ್ಗಾಯ್ ಶೊಯ್ಗು ಮತ್ತು ಆಂತರಿಕ ಸಚಿವ ರಶೀದ್ ನುರ್ಲಗಲ್ಯೇವ್ ಅವರುಗಳಿಗೆ ಮೆಡ್ವೆಡೇವ್ ಆದೇಶಿಸಿದ್ದಾರೆ.

ಪ್ರತ್ಯೇಕವಾದಿ ದಕ್ಷಿಣ ಕಾಕಸಿಯನ್ ಪ್ರಾಂತ್ಯದ ಮೇಲೆ ಶುಕ್ರವಾರ ಜಾರ್ಜಿಯಾ ದಾಳಿಮಾಡಿದ್ದು, ಅದರ ಯುದ್ಧವಿಮಾನಗಳು ಹಲವಾರು ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ಇದರಿಂದಾಗಿ ಬಹುದೊಡ್ಡ ಹಾನಿಯುಂಟಾಗಿದೆ ಎಂದು ವರದಿಗಳು ತಿಳಿಸಿವೆ.

ರಶ್ಯಾದ ಮಾನವೀಯ ಸಹಕಾರದ ವಾಹನವೊಂದು ಬೆಂಕಿಗಾಹುತಿಯಾಗಿದೆ ಎಂದು ವಿದೇಶಾಂಗ ಸಚಿವ ಸೆರ್ಗಾಯ್ ಲಾವ್ರೋವ್ ಹೇಳಿದ್ದಾರೆ. ಯುದ್ಧದಿಂದಾಗಿ ಸ್ಥಳೀಯ ಜನತೆಯ ಭಯಭೀತರಾಗಿದ್ದು, ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಸಂಘರ್ಷವನ್ನು ಕೊನೆಗೊಳಿಸುವಂತೆ ಅಮೆರಿಕ, ಯೂರೋಪ್ ಒಕ್ಕೂಟ, ನ್ಯಾಟೋ ಮತ್ತು ಯುರೋಪ್ ಭದ್ರತೆ ಮತ್ತು ಸಹಕಾರ ಸಂಘಟನೆಗಳು ಕರೆ ನೀಡಿವೆ.

ದಕ್ಷಿಣ ಒಸ್ಸೆಟಿಯ ನಾಯಕ ಎಡ್ವರ್ಡ್ ಕೊಕೊಟಿ ಅವರು ಸಂಘರ್ಷದಿಂದಾಗಿ 1,400 ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. ಆಗಸ್ಟ್ ಒಂದರಿಂದ ಗುಂಡುದಾಳಿಗಳು ಆರಂಭವಾಗಿದ್ದು, ಶುಕ್ರವಾರ ಬಾಂಬ್ ದಾಳಿ ನಡೆಸಲಾಗಿತ್ತು.

ಜಾರ್ಜಿಯಾ ಆಕ್ರಮಣದಿಂದಾಗಿ ರಶ್ಯದ 10 ಮಂದಿ ಶಾಂತಿಪಾಲನ ಸಿಬ್ಬಂದಿಗಳು ಹತರಾಗಿದ್ದಾರೆ ಎಂದು ರಶ್ಯಾ ವಕ್ತಾರರು ಹೇಳಿದ್ದಾರೆ.
ಮತ್ತಷ್ಟು
ಒಬಾಮ ಗೆಲವು ಬಯಸುವ ಹಿಲರಿ
ಚೀನಪರ ಗೂಢಚರ್ಯೆ: ಅಮೆರಿಕ ಪ್ರಜೆಗೆ ಸಜೆ
'ವೆಲ್‌ಕಮ್ ವರ್ಲ್ಡ್' ಎಂದ ಭಾರತೀಯ ಪತ್ರಕರ್ತ
ವರ್ಷಾಂತ್ಯದೊಳಗೆ ಅಣುಒಪ್ಪಂದ: ಅಮೆರಿಕ ವಿಶ್ವಾಸ
ಒಲಿಂಪಿಕ್ಸ್: ವಿಶ್ವಶಾಂತಿಗೆ ಮೂನ್ ಮನವಿ
ಪರಿವಾರ ಸಮೇತ ಬೀಜಿಂಗ್‌ನಲ್ಲಿ ಸೋನಿಯಾ