ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತೀಯರ ಇಂಗ್ಲಿಷ್ ಬ್ರಿಟಿಶರಿಗಿಂತ ಬೆಟರ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯರ ಇಂಗ್ಲಿಷ್ ಬ್ರಿಟಿಶರಿಗಿಂತ ಬೆಟರ್!
ಭಾರತ ಮತ್ತು ಇತರ ಮಾಜಿ ಬ್ರಿಟಿಶ್ ವಸಾಹತುಗಳಿಂದ ಬಂದಿರುವ ವಿದ್ಯಾರ್ಥಿಗಳ ಆಂಗ್ಲ ಭಾಷಾ ಚಾತುರ್ಯವು, ಸ್ಥಳೀಯ ಸಹವಿದ್ಯಾರ್ಥಿಗಳಿಗೆ ಹೋಲಿಸಿದರೆ ಉತ್ತಮವಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಿಸಿದ್ದಾರೆ.

ಬ್ರಿಟಿಶ್ ವಿಶ್ವವಿದ್ಯಾಲಯದ ಪದವಿಪೂರ್ವ ವಿದ್ಯಾರ್ಥಿಗಳು ಇಂಗ್ಲಿಷ್ ಕಾಗುಣಿತ, ವ್ಯಾಕರಣ ಮತ್ತು ಉದ್ಧರಣಾ ಚಿನ್ನೆಗಳನ್ನು ಸೂಕ್ತವಾಗಿ ಬಳಸದಿರುವ ಕಾರಣ ಉಪನ್ಯಾಸಕರು ಆಗೀಗ ಮೂಲಭೂತ ಇಂಗ್ಲಿಷ್ ಅಂಶಗಳನ್ನು ಪಾಠಮಾಡುವ ಸಂದರ್ಭ ಮೂಡುತ್ತದೆ ಎಂದು ವರದಿಯೊಂದು ಹೇಳಿದೆ.

ಭಾರತ ಅಥವಾ ಇತರ ಮಾಜಿ ವಸಾಹತುಗಳಿಂದ ಬಂದಿರುವ ವಿದ್ಯಾರ್ಥಿಗಳ ಮೂಲಭೂತ ಇಂಗ್ಲಿಷ್ ಸ್ಥಳೀಯ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಉತ್ತಮವಾಗಿದೆ ಎಂದು ಉಪನ್ಯಾಸಕರು ಅಭಿಪ್ರಾಯಿಸಿದ್ದಾರೆ.

ವಿದ್ಯಾರ್ಥಿಗಳು 'there ಎಂಬುದಕ್ಕೆ their; who's ಇರುವಲ್ಲಿ whose; truely ಎಂದಿರಬೇಕಲ್ಲಿ truly; occured ಎಂಬಲ್ಲಿಗೆ occurred ಮತ್ತು speachಗೆ speech ಎಂದೆಲ್ಲ ಬರೆಯುತ್ತಾರಂತೆ.

ಬ್ರಿಟಿಷ್ ವಿದ್ಯಾರ್ಥಿಗಳು ಅವರ ಈ 'ಭಯಂಕರ' ಇಂಗ್ಲಿಷನ್ನು ಅವರ ಅಸೈನ್‌ಮೆಂಟುಗಳಲ್ಲೂ ಬಳಸುತ್ತಾರೆ ಎಂಬುದಾಗಿ ಭಾರತೀಯ ಮೂಲದ ಉಪನ್ಯಾಸಕರೊಬ್ಬರು ಹೇಳಿದ್ದಾರೆ. ಅಲ್ಲದೆ ಕೆಲವೊಮ್ಮೆ ತಮ್ಮ ಅಭಿವ್ಯಕ್ತಿಯ ವೇಳೆಯೂ ಇಲ್ಲಿನ ವಿದ್ಯಾರ್ಥಿಗಳು ಪರದಾಡುತ್ತಾರೆ, ಆದರೆ ವಿದೇಶಿ ವಿದ್ಯಾರ್ಥಿಗಳು ಉತ್ತಮ ಭಾಷಾ ಚಾತುರ್ಯ ಹೊಂದಿದ್ದಾರೆ ಎಂದು ಅವರು ಹೇಳುತ್ತಾರೆ.

ಇಂಗ್ಲಿಷ್ ಭಾಷಾ ಮಟ್ಟ ಎಷ್ಟು ಕುಸಿದಿದೆ ಎಂದಲ್ಲಿ, ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ಸಹಜ ಎಂಬಂತೆ ನಿರ್ಲಕ್ಷ್ಯಿಸುವ ಪರಿಸ್ಥಿತಿ ಬಂದಿದೆ ಎಂದು ನುರಿತವರು ಹೇಳುತ್ತಿದ್ದಾರೆ.
ಮತ್ತಷ್ಟು
ಮಾನವೀಯ ಸಹಕಾರಕ್ಕೆ ಮೆಡ್ವೆಡೇವ್ ಆದೇಶ
ಒಬಾಮ ಗೆಲವು ಬಯಸುವ ಹಿಲರಿ
ಚೀನಪರ ಗೂಢಚರ್ಯೆ: ಅಮೆರಿಕ ಪ್ರಜೆಗೆ ಸಜೆ
'ವೆಲ್‌ಕಮ್ ವರ್ಲ್ಡ್' ಎಂದ ಭಾರತೀಯ ಪತ್ರಕರ್ತ
ವರ್ಷಾಂತ್ಯದೊಳಗೆ ಅಣುಒಪ್ಪಂದ: ಅಮೆರಿಕ ವಿಶ್ವಾಸ
ಒಲಿಂಪಿಕ್ಸ್: ವಿಶ್ವಶಾಂತಿಗೆ ಮೂನ್ ಮನವಿ