ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್ ವಿಶ್ವಾಸ ಸಾಬೀತುಪಡಿಸಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ವಿಶ್ವಾಸ ಸಾಬೀತುಪಡಿಸಲಿ
ಇಸ್ಲಾಮಾಬಾದ್: ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಅಧಿಕಾರದಲ್ಲಿ ಇನ್ನಷ್ಟುದಿನ ಮುಂದುವರಿಯಬಾರದು ಎಂಬುದಾಗಿ ಹೇಳಿರುವ ಪ್ರಧಾನಿ ಯೂಸುಫ್ ರಾಜ ಗಿಲಾನಿ, ಮುಷರಪ್ ಹೊಸದಾಗಿ ವಿಶ್ವಾಸ ಮತ ಯಾಚಿಸಬೇಕು, ಇಲ್ಲದೇ ಇದ್ದಲ್ಲಿ, ಅವರ ವಿರುದ್ಧ ವಾಗ್ದಂಡನೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಫೆಬ್ರವರಿ 18ರ ಚುನಾವಣೆಯಲ್ಲಿ, ಪ್ರಜೆಗಳು ಪ್ರಜಾಪ್ರಭುತ್ವ ಹಾದಿಯಲ್ಲಿ ಸಾಗಲು ಸ್ಪಷ್ಟ ಅಧಿಕಾರ ನೀಡಿದ್ದಾರೆ ಎಂದು ಹೇಳಿರುವ ಅವರು ಪ್ರಜಾಪ್ರಭುತ್ವ ಉದಯದ ಶುಭಸಮಾಚಾರವನ್ನು ಪಾಕಿಸ್ತಾನದ ಪ್ರಜೆಗಳು ಶೀಘ್ರವೇ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಬೀಜಿಂಗ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮುಷರಫ್ ಅವರು ಹೊಸದಾಗಿ ವಿಶ್ವಾಸ ಸಾಬೀತುಪಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಇಲ್ಲವಾದರೆ ಸಾರ್ವಭೌಮ ಸ್ವತಂತ್ರ ಮಂಡಳಿಯಾಗಿರುವ ಸಂಸತ್ತು, ಅವರಿಗೆ ವಾಗ್ದಂಡನೆ ವಿಧಿಸುವ ಹಕ್ಕನ್ನು ಹೊಂದಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಭಾರತೀಯರ ಇಂಗ್ಲಿಷ್ ಬ್ರಿಟಿಶರಿಗಿಂತ ಬೆಟರ್!
ಮಾನವೀಯ ಸಹಕಾರಕ್ಕೆ ಮೆಡ್ವೆಡೇವ್ ಆದೇಶ
ಒಬಾಮ ಗೆಲವು ಬಯಸುವ ಹಿಲರಿ
ಚೀನಪರ ಗೂಢಚರ್ಯೆ: ಅಮೆರಿಕ ಪ್ರಜೆಗೆ ಸಜೆ
'ವೆಲ್‌ಕಮ್ ವರ್ಲ್ಡ್' ಎಂದ ಭಾರತೀಯ ಪತ್ರಕರ್ತ
ವರ್ಷಾಂತ್ಯದೊಳಗೆ ಅಣುಒಪ್ಪಂದ: ಅಮೆರಿಕ ವಿಶ್ವಾಸ