ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜಾರ್ಜಿಯಾ ಮೇಲೆ ರಷ್ಯಾ ದಾಳಿಗೆ 2ಸಾವಿರ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾರ್ಜಿಯಾ ಮೇಲೆ ರಷ್ಯಾ ದಾಳಿಗೆ 2ಸಾವಿರ ಬಲಿ
ದಕ್ಷಿಣ ಒಸೆಟ್ಟಿಯಾ ಪ್ರದೇಶಕ್ಕೆ ಸಂಬಂಧಿಸಿದಂತೆ ರಷ್ಯಾ ಹಾಗೂ ಜಾರ್ಜಿಯಾ ನಡುವಿನ ಕದನ ಭಾನುವಾರ 3ನೆ ದಿನಕ್ಕೆ ಕಾಲಿಟ್ಟಿದ್ದು, ಘಟನೆಯಲ್ಲಿ 2000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಎರಡನೇ ದಿನವಾದ ಶನಿವಾರ ರಷ್ಯಾದ ಭೂಸೇನೆ ಮತ್ತು ವಾಯುಪಡೆ ಜಾರ್ಜಿಯಾ ಗಡಿಭಾಗದ ಮೇಲೆ ಭಾರಿ ಪ್ರಮಾಣದ ಬಾಂಬ್ ದಾಳಿ ನಡೆಸಿದೆ.

ಮತ್ತೊಂದೆಡೆ ಜಾರ್ಜಿಯಾ ಕೂಡ ದಕ್ಷಿಣ ಒಸೆಟ್ಟಿಯಾದ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಜನ ತೀವ್ರ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಕಾಳಗದಲ್ಲಿ ದಕ್ಷಿಣ ಒಸೆಟ್ಟಿಯಾದ ರಾಜಧಾನಿ ಟಕಿನ್‌‌ವಾಲಿಯೊದಲ್ಲಿಯೇ ಸಾವಿರಕ್ಕೂ ಅಧಿಕ ಜನ ಬಲಿಯಾಗಿದ್ದಾರೆ.

ಸಾವಿನ ಸಂಖ್ಯೆಯ ಕುರಿತು ಹೇಳಿಕೆ ನೀಡಿರುವ ರಷ್ಯಾ,ಜಾರ್ಜಿಯಾ ನಡೆಸಿದ ಟ್ಯಾಂಕ್ ದಾಳಿಯಲ್ಲಿ ಭಾರಿ ಸಂಖ್ಯೆಯಲ್ಲಿ ನಾಗರಿಕರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದೆ.

ದಕ್ಷಿಣ ಒಸೆಟ್ಟಿಯಾ ಪ್ರದೇಶವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಾರ್ಜಿಯಾ ಪಡೆಗಳು ಶುಕ್ರವಾರ ಆ ಪ್ರದೇಶದ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ದಕ್ಷಿಣ ಒಸೆಟ್ಟಿಯಾದ ಸೇನೆ ಕೂಡ ಪ್ರತಿರೋಧ ವ್ಯಕ್ತಪಡಿಸಿತ್ತು.
ಮತ್ತಷ್ಟು
ಮುಷರಫ್ ವಿಶ್ವಾಸ ಸಾಬೀತುಪಡಿಸಲಿ
ಭಾರತೀಯರ ಇಂಗ್ಲಿಷ್ ಬ್ರಿಟಿಶರಿಗಿಂತ ಬೆಟರ್!
ಮಾನವೀಯ ಸಹಕಾರಕ್ಕೆ ಮೆಡ್ವೆಡೇವ್ ಆದೇಶ
ಒಬಾಮ ಗೆಲವು ಬಯಸುವ ಹಿಲರಿ
ಚೀನಪರ ಗೂಢಚರ್ಯೆ: ಅಮೆರಿಕ ಪ್ರಜೆಗೆ ಸಜೆ
'ವೆಲ್‌ಕಮ್ ವರ್ಲ್ಡ್' ಎಂದ ಭಾರತೀಯ ಪತ್ರಕರ್ತ