ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರ್ರಫ್‌‌ರಿಂದ ಸಹಾಯಧನ ಅವ್ಯವಹಾರ:ಜರ್ದಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರ್ರಫ್‌‌ರಿಂದ ಸಹಾಯಧನ ಅವ್ಯವಹಾರ:ಜರ್ದಾರಿ
ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿನ ಬೆಂಬಲಕ್ಕಾಗಿ ಇಸ್ಲಾಮಾಬಾದ್‌ಗೆ ಅಮೆರಿಕ ನೀಡಿದ 700 ದಶಲಕ್ಷ ಡಾಲರ್‌ನ ಸಹಾಯಧನವನ್ನು ಅಧ್ಯಕ್ಷ ಮುಷರಫ್ ದುರ್ಬ ಳಕೆ ಮಾಡಿದ್ದಾರೆ ಎಂದು ಪಿಪಿಪಿ ಮುಖ್ಯಸ್ಥ ಜರ್ದಾರಿ ಆರೋಪ ಮಾಡಿದ್ದು, ಕಪಟ ಐಎಸ್ಐ ಸದಸ್ಯರುಗಳು ಇದರಿಂದ ಲಾಭ ಪಡೆದಿರಬಹುದು ಎಂದು ತಿಳಿಸಿದ್ದಾರೆ.

ಅಮೆರಿಕ ಶಸ್ತ್ರ ಪಡೆಗಳಿಗೆ ಪ್ರತಿ ವರ್ಷ ನೀಡುತ್ತಿದ್ದ 1 ಬಿಲಿಯ ಡಾಲರ್‌ನಲ್ಲಿ ಮುಷರಫ್ ಎಲ್ಲವನ್ನೂ ಬಿಡುಗಡೆ ಮಾಡುತ್ತಿರಲಿಲ್ಲ. ಸೇನೆ 250-300 ದಶಲಕ್ಷ ಡಾಲರ್ ವರೆಗೆ ಪಡೆಯುತ್ತಿತ್ತು. ಆದರೆ ಉಳಿದ ಹಣ ಎಲ್ಲಿ ಹೋಯಿತು ಎಂದು ಜರ್ದಾರಿ ಪ್ರಶ್ನಿಸಿದ್ದಾರೆ.

ಅವರು ಹೇಳುವಂತೆ ಇದು ಬಜೆಟ್ ಬೆಂಬಲಕ್ಕೆ ಹೋಗುವುದು. ಆದರೆ ಇದು ಸೂಕ್ತ ಉತ್ತರವಲ್ಲ. ತಾವು ಮಾತನಾಡುತ್ತಿರುವುದು ಸುಮಾರು 700 ದಶಲಕ್ಷ ಡಾಲರ್ ಹಣದ ಬಗ್ಗೆ. ಉಳಿದವುಗಳನ್ನು ಮುಷರಫ್ ಇನ್ನಿತರ ಯೋಜನೆಗಳಿಗೆ ಉಪಯೋಗಿಸಿದ್ದಾರೆ. ತಾವು ಅದನ್ನು ಪತ್ತೆ ಮಾಡಬೇಕಾಗಿದೆ ಎಂದು ಜರ್ದಾರಿ ತಿಳಿಸಿದ್ದಾರೆ.

ಅಮೆರಿಕದ ಧನ ಸಹಾಯ ಐಎಸ್ಐಯ ಕೆಲ ಕಪಟ ಅಧಿಕಾರಿಗಳಿಗೆ ಹೋಗಿರ ಬಹುದು ಎಂಬುದು ಜರ್ದಾರಿ ವಾದ.
ಮತ್ತಷ್ಟು
ಜಾರ್ಜಿಯಾ ಮೇಲೆ ರಷ್ಯಾ ದಾಳಿಗೆ 2ಸಾವಿರ ಬಲಿ
ಮುಷರಫ್ ವಿಶ್ವಾಸ ಸಾಬೀತುಪಡಿಸಲಿ
ಭಾರತೀಯರ ಇಂಗ್ಲಿಷ್ ಬ್ರಿಟಿಶರಿಗಿಂತ ಬೆಟರ್!
ಮಾನವೀಯ ಸಹಕಾರಕ್ಕೆ ಮೆಡ್ವೆಡೇವ್ ಆದೇಶ
ಒಬಾಮ ಗೆಲವು ಬಯಸುವ ಹಿಲರಿ
ಚೀನಪರ ಗೂಢಚರ್ಯೆ: ಅಮೆರಿಕ ಪ್ರಜೆಗೆ ಸಜೆ