ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜಾರ್ಜಿಯಾ ಹಿಂಸಾಚಾರ ಸಮ್ಮತವಲ್ಲ- ಬುಷ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾರ್ಜಿಯಾ ಹಿಂಸಾಚಾರ ಸಮ್ಮತವಲ್ಲ- ಬುಷ್
ಜಾರ್ಜಿಯಾದ ವಿರುದ್ಧ ರಶ್ಯಾ ಸೇನಾದಾಳಿ ನಡೆಸಿ ಹಿಂಸಾಚಾರ ನಡೆಸುತ್ತಿರುವುದು ಸಮ್ಮತವಲ್ಲ, ರಷ್ಯಾ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ತೀವ್ರವಾಗಿ ಖಂಡಿಸಿದ್ದಾರೆ.

ದಕ್ಷಿಣ ಒಸ್ಸೆಟಿಯಾ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ರಷ್ಯಾ ದಾಳಿಯನ್ನು ಮುಂದುವರಿಸಬಾರದು ಎಂದು ಅಮೆರಿಕ ರಷ್ಯಾವನ್ನು ಒತ್ತಾಯಿಸಿದೆ.

"ರಶ್ಯಾ, ಜಾರ್ಜಿಯಾದ ದಕ್ಷಿಣ ಒಸ್ಸೆಟಿಯಾ ಮೇಲೆ ಬಾಂಬ್ ದಾಳಿ ನಡೆಸಿರುವುದು ಸರಿಯಾದ ಕ್ರಮವಲ್ಲ, ನಾವು ಈಗಾಗಲೇ ತೀವ್ರವಾದ ಖಂಡನಾ ನಿರ್ಣಯವನ್ನು ರಶ್ಯಾಗೆ ತಿಳಿಸಿದ್ದೇವೆ" ಎಂದು ಬುಷ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜಾರ್ಜಿಯಾದ ವಿರುದ್ಧ ರಶ್ಯಾ ನಡೆಸುತ್ತಿರುವ ದಾಳಿಗೆ ಯಾವುದೇ ಅರ್ಥವಿಲ್ಲ. ಆದರೆ ದಾಳಿಯನ್ನು ಮುದುವರಿಸಿದಲ್ಲಿ ಅಮೆರಿಕದೊಂದಿಗಿನ ಸಂಬಂಧದಲ್ಲಿ ತೊಡಕಾಗಲಿದೆ ಎಂದು ಅಮೆರಿಕೆಯ ಉಪಾಧ್ಯಕ್ಷ ಡಿಕ್ ಚೀನಿ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಒಸ್ಸೆಟಿಯಾದಿಂದ ಕಾಲ್ತೆಗೆಯುವುದಾಗಿ ಈಗಾಗಲೇ ಹೇಳಿಕೆ ನೀಡಿ ಶಾಂತಿ ಮಾತುಕತೆಗೆ ಸಿದ್ಧವೆಂದು ಜಾರ್ಜಿಯಾ ಹೇಳಿದ ನಂತರವೂ, ಜಾರ್ಜಿಯಾದ ಸೇನಾಪಡೆಗಳ ವಿರುದ್ಧ ರಶ್ಯಾ ಭೂದಳ ಮತ್ತು ನೌಕಾದಳು ದಾಳಿ ಮುಂದುವರಿಸಿವೆ ಎಂದು ಅಮೆರಿಕ ದೂರಿದೆ.
ಮತ್ತಷ್ಟು
ಪಾಕ್ ಪ್ರವೇಶಿಸುವ ಭಾರತೀಯರ ಮೇಲೆ ಹದ್ದಿನ ಕಣ್ಣು
ಇಂದು ಮುಷರಫ್‌ಗೆ ವಾಗ್ದಂಡನೆ
ಮುಷರ್ರಫ್‌‌ರಿಂದ ಸಹಾಯಧನ ಅವ್ಯವಹಾರ:ಜರ್ದಾರಿ
ಜಾರ್ಜಿಯಾ ಮೇಲೆ ರಷ್ಯಾ ದಾಳಿಗೆ 2ಸಾವಿರ ಬಲಿ
ಮುಷರಫ್ ವಿಶ್ವಾಸ ಸಾಬೀತುಪಡಿಸಲಿ
ಭಾರತೀಯರ ಇಂಗ್ಲಿಷ್ ಬ್ರಿಟಿಶರಿಗಿಂತ ಬೆಟರ್!