ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಾಗ್ದಂಡನೆ ಎದುರಿಸಲು ಮುಷರಫ್ ಸಿದ್ದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಗ್ದಂಡನೆ ಎದುರಿಸಲು ಮುಷರಫ್ ಸಿದ್ದ
ರಾಷ್ಟ್ರಪತಿ ಮುಷರಫ್ ತಮ್ಮ ಸ್ಥಾನಕ್ಕೆ ಪಾಜೀನಾಮೆಯನ್ನು ನೀಡುವುದಿಲ್ಲ, ಬದಲಿಗೆ ಸಂಸತ್ತಿನಲ್ಲಿ ವಾಗ್ದಂಡನೆಯನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಸೋಮವಾರದಂದು ದೇಶದ ಎಲ್ಲ ರಾಜ್ಯಗಳು ಅಧ್ಯಕ್ಷ ಮುಷರಫ್ ಸಂಸತ್ತಿನಿಂದ ವಿಶ್ವಾಸಮತ ಪಡೆಯಬೇಕು ಎಂದು ನಿರ್ಣಯವನ್ನು ಮಂಡಿಸಲಿವೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಪತಿ ಮುಷರಫ್ ರಾಜೀನಾಮೆಯನ್ನು ನೀಡುತ್ತಿದ್ದಾರೆ ಎಂದು ಹೇಳುವ ವ್ಯಕ್ತಿಗಳು ಸುಳ್ಳು ಹೇಳುತ್ತಿದ್ದಾರೆ ಅಥವಾ ಅವರಿಗೆ ಮುಷರಫ್ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲ ಎಂದು ಅಧ್ಯಕ್ಷರ ವಕ್ತಾರ ರಷೀದ್ ಖುರೇಶಿ ಹೇಳಿದ್ದಾರೆ.

ರಾಷ್ಟ್ರಪತಿ ಮುಷರಫ್ ಉತ್ತಮ ಚಾರಿತ್ರ್ಯ ಹೊಂದಿದ್ದು ಅವರತ್ತ ಬೆರಳು ತೋರಿಸುವುದು ಯಾರಿಗೂ ಸಾಧ್ಯವಾಗದು, ಅವರದು ಕಳಂಕರಹಿತ ದಾಖಲೆಯಾಗಿದೆ ಎಂದು ಖುರೇಶಿ ಅಭಿಪ್ರಾಯ ಪಟ್ಟಿದ್ದಾರೆ.
ಮತ್ತಷ್ಟು
ಜಾರ್ಜಿಯಾ ಹಿಂಸಾಚಾರ ಸಮ್ಮತವಲ್ಲ- ಬುಷ್
ಪಾಕ್ ಪ್ರವೇಶಿಸುವ ಭಾರತೀಯರ ಮೇಲೆ ಹದ್ದಿನ ಕಣ್ಣು
ಇಂದು ಮುಷರಫ್‌ಗೆ ವಾಗ್ದಂಡನೆ
ಮುಷರ್ರಫ್‌‌ರಿಂದ ಸಹಾಯಧನ ಅವ್ಯವಹಾರ:ಜರ್ದಾರಿ
ಜಾರ್ಜಿಯಾ ಮೇಲೆ ರಷ್ಯಾ ದಾಳಿಗೆ 2ಸಾವಿರ ಬಲಿ
ಮುಷರಫ್ ವಿಶ್ವಾಸ ಸಾಬೀತುಪಡಿಸಲಿ