ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್‌ ರಾಜೀನಾಮೆಗೆ ವಿರೋಧಿಗಳ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್‌ ರಾಜೀನಾಮೆಗೆ ವಿರೋಧಿಗಳ ಒತ್ತಾಯ
ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸುವಂತೆ ಒತ್ತಾಯಿಸುತ್ತಿದ್ದು ಮುಂಬರುವ ದಿನಗಳಲ್ಲಿ ನಡೆಯುವ ವಾಗ್ದಂಡನೆಯ ಪರವಾಗಿ ಮತಚಲಾಯಿಸುವುದಾಗಿ ಪರ್ವೇಜ್ ಮುಷರಫ್ ಬೆಂಬಲಿತ ಪಕ್ಷವಾದ ಪಿಎಂಎಲ್-(ಕ್ಯೂ) ವಿರೋಧಿಗಳು ಆಗ್ರಹಿಸಿದ್ದಾರೆ.

ಮುಷರಫ್ ರಾಜೀನಾಮೆಯನ್ನು ನೀಡಿದಲ್ಲಿ ಸುರಕ್ಷಿತವಾಗಿ ತೆರಳಲು ಅನುಮತಿಯನ್ನು ನೀಡುವಂತೆ ಪಿಎಂಎಲ್ (ಕ್ಯೂ) ಪಕ್ಷದ 10 ಮಂದಿ ಸಂಸತ್ ಸದಸ್ಯರು, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿಯವರಿಗೆ ಮನವಿ ಮಾಡಿದ್ದಾರೆ.

ರಾಷ್ಟ್ರಾಧ್ಯಕ್ಷರು ರಾಜೀನಾಮೆಯನ್ನು ನೀಡುವುದರಿಂದ ಪ್ರಜಾಪ್ರಭುತ್ವವನ್ನು ಬಲಪಡಿಸಿದಂತಾಗಿ ದೇಶಕ್ಕೆ ಒಳಿತಾಗುತ್ತದೆ ಎಂದು ವಿರೋಧ ಪಕ್ಷಗಳು ಮುಷರಫ್‌ರನ್ನು ಆಗ್ರಹಿಸಿವೆ.

ರಾಷ್ಟ್ರಾಧ್ಯಕ್ಷ ಮುಷರಫ್ ಮತ್ತೊಮ್ಮೆ ಸಂಸತ್ತಿನಲ್ಲಿ ವಿಶ್ವಾಸಮತ ಪಡೆಯುವಂತೆ ದೇಶದಲ್ಲಿರುವ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಹಾಗೂ ಸಂಸತ್ತಿನಲ್ಲಿ ಮಸುದೆಯನ್ನು ಮಂಡಿಸಿ ಮುಷರಫ್‌ಗೆ ವಾಗ್ದಂಡನೆಯನ್ನು ವಿಧಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಅಮೆರಿಕ ಹಣವನ್ನು ದುರ್ಬಳಕೆ ಮಾಡಿಲ್ಲ -ಮುಷರಫ್
ತಾಲಿಬಾನ್‌‍ಗೆ ಐಎಸ್‌ಐ ಬೆಂಬಲ -ನ್ಯಾಟೋ
ವಾಗ್ದಂಡನೆ ಎದುರಿಸಲು ಮುಷರಫ್ ಸಿದ್ದ
ಜಾರ್ಜಿಯಾ ಹಿಂಸಾಚಾರ ಸಮ್ಮತವಲ್ಲ- ಬುಷ್
ಪಾಕ್ ಪ್ರವೇಶಿಸುವ ಭಾರತೀಯರ ಮೇಲೆ ಹದ್ದಿನ ಕಣ್ಣು
ಇಂದು ಮುಷರಫ್‌ಗೆ ವಾಗ್ದಂಡನೆ