ಶ್ರೀಲಂಕಾದ ಉತ್ತರ ಭಾಗದಲ್ಲಿರುವ ತಮಿಳು ಉಗ್ರರ ವಿರುದ್ದ ನಡೆಸಿದ ಭಾರಿ ಕಾರ್ಯಾಚರಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಉಗ್ರರು ಹತಪರಾಗಿದ್ದಾರೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ಶ್ರೀಲಂಕಾದ ತಮಿಳು ಉಗ್ರರ ವಾಯುನಿಯಾ ಪ್ರಾಂತ್ಯದಲ್ಲಿ ಬಲಿಷ್ಟ ಕೋಟೆಯನ್ನು ಭೇಧಿಸಲು ಸೇನೆಯು ನುಗ್ಗಿದಾಗ ನಡೆದ ಘರ್ಷಣೆಯಲ್ಲಿ ಕೆಲ ಸೈನಿಕರು ಸಾವನ್ನಪ್ಪಿದ್ದು ಭಾರಿ ಪ್ರಮಾಣದಲ್ಲಿ ಉಗ್ರರು ಹತರಾಗಿದ್ದಾರೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
ಕಳೆದ ವಾರದಿಂದ ನಿರಂತರ ಸೇನಾಪಡೆಗಳು ಹಾಗೂ ಉಗ್ರರ ಮಧ್ಯ ತೀವ್ರತೆರನಾದ ಹೋರಾಟ ನಡೆಸುತ್ತಿದ್ದು ಹೋರಾಟದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಮಾಧ್ಯಮದ ಮೂಲಗಳು ತಿಳಿಸಿವೆ.
|