ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್‌ಗೆ ವಾಗ್ದಂಡನೆ: ಮಹತ್ವದ ಅಧಿವೇಶನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್‌ಗೆ ವಾಗ್ದಂಡನೆ: ಮಹತ್ವದ ಅಧಿವೇಶನ ಆರಂಭ
ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್‌ಗೆ ವಾಗ್ದಂಡನೆ ವಿಧಿಸಲು ಉದ್ದೇಶಿಸಿರುವ ಪಾಕಿಸ್ತಾನದ ಮಹತ್ವದ ಸಂಸತ್ತಿನ ಅಧಿವೇಶನ ಆರಂಭವಾಗಿದೆ.

342 ಬಲದ ಸದಸ್ಯರುಳ್ಳ ಸಂಸತ್ತು ಅಧಿವೇಶನಕ್ಕೆ ಮುನ್ನ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿಯವರ ನೇತೃತ್ವದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸದಸ್ಯರು ಸಭೆಯನ್ನು ನಡೆಸಿ ಮುಷರಫ್ ವಿರುದ್ದ ವಾಗ್ದಂಡನೆಯನ್ನು ವಿಧಿಸುವ ನಿಯಮಾವಳಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ) ಪಕ್ಷಗಳು ನಡೆಸಿದ ಸಭೆಯಲ್ಲಿ ಮುಷರಫ್‌ಗೆ ವಾಗ್ದಂಡನೆಯನ್ನು ವಿಧಿಸುವವರೆಗೆ ಅಧ್ವೇಶನವನ್ನು ಮುಂದುವರಿಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ) ಪಕ್ಷಗಳು ಅಧಿವೇಶನಕ್ಕೆ ಮೊದಲು ಸಭೆಯನ್ನು ನಡೆಸಿದ್ದು ಸಭೆಯಲ್ಲಿ ಮುಷರಫ್ ವಿರುದ್ದ ಸಲ್ಲಿಸಬೇಕಾದ ಆರೋಪ ಪಟ್ಟಿಯನ್ನು ಸಿದ್ದಪಡಿಸಿ ಮುಷರಫ್ ವಿರುದ್ದ ದುರ್ನಡತೆ, ಸಂವಿಧಾನ ಉಲ್ಲಂಘನೆ, ಹಣಕಾಸಿನ ಅವ್ಯವಹಾರಗಳ ಕುರಿತಂತೆ ಚಾರ್ಜ್‌ಶೀಟ್ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು
ಶ್ರೀಲಂಕಾ: ಸೇನಾ ಕಾರ್ಯಾಚರಣೆಯಲ್ಲಿ 50 ಉಗ್ರರ ಬಲಿ
ಜಾರ್ಜಿಯಾದ ಮೇಲೆ ರಶ್ಯಾ ವೈಮಾನಿಕ ದಾಳಿ
ಮುಷರಫ್‌ ರಾಜೀನಾಮೆಗೆ ವಿರೋಧಿಗಳ ಒತ್ತಾಯ
ಅಮೆರಿಕ ಹಣವನ್ನು ದುರ್ಬಳಕೆ ಮಾಡಿಲ್ಲ -ಮುಷರಫ್
ತಾಲಿಬಾನ್‌‍ಗೆ ಐಎಸ್‌ಐ ಬೆಂಬಲ -ನ್ಯಾಟೋ
ವಾಗ್ದಂಡನೆ ಎದುರಿಸಲು ಮುಷರಫ್ ಸಿದ್ದ