ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಬುಡಕಟ್ಟು ಪ್ರದೇಶದಲ್ಲಿ 50 ಉಗ್ರರ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಬುಡಕಟ್ಟು ಪ್ರದೇಶದಲ್ಲಿ 50 ಉಗ್ರರ ಹತ್ಯೆ
ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ ಗಡಿಭಾಗದಲ್ಲಿರುವ ಬಜೌರ್ ಬುಡಕಟ್ಟು ಪ್ರದೇಶಗಳಲ್ಲಿರುವ ತಾಲಿಬಾನ್‌ಗಳ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ 50 ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಖಾರ್ ಮತ್ತು ತೊರಘಂಡಿ ಪ್ರದೇಶಗಳಲ್ಲಿ ಅರೆಸೇನಾ ಪಡೆಗಳ ಮೇಲೆ ತಾಲಿಬಾನ್ ಉಗ್ರರು ರಾಕೆಟ್ ಹಾಗೂ ಸಶಸ್ತ್ರ ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸಿದ ಸೇನಾಪಡೆಗಳು 50 ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಗ್ರರ ವಿರುದ್ಧ ಸೇನಾಪಡೆಗಳು ನಡೆಸಿದ ಕಾರ್ಯಾಚರಣೆಯನ್ನು ವೀಕ್ಷಿಸಿದ ಪ್ರತ್ಯಕ್ಷದರ್ಶಿಗಳು ಅನೇಕ ಉಗ್ರರ ಶವಗಳನ್ನು ನೋಡಿದ್ದಾಗಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ತಾಲಿಬಾನ್‌ ಉಗ್ರರು ಬಜೌರ್ ಪ್ರದೇಶದಲ್ಲಿ ತಮ್ಮ ಹಿಡಿತವನ್ನು ಬಲಿಷ್ಠಗೊಳಿಸಿದ್ದು, ಕಳೆದ ವಾರದಿಂದ ಉಗ್ರರ ಮತ್ತು ಸೇನಾಪಡೆಗಳ ಘರ್ಷಣೆಯಲ್ಲಿ 100 ಉಗ್ರರು ಹಾಗೂ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.

ಪೇಶಾವರದಲ್ಲಿ 12 ಬಲಿ
ಪಾಕಿಸ್ತಾನದ ಆಗ್ನೆಯ ಭಾಗದಲ್ಲಿರುವ ಪೇಶಾವರದಲ್ಲಿ ವಾಯುಪಡೆಗಳ ಬಸ್‌‌ ಮೇಲೆ ಉಗ್ರಗಾಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ 13 ಮಂದಿ ಮೃತರಾಗಿ, 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಹೊರವಲಯದಲ್ಲಿರುವ ಸೇತುವೆಯ ಮೇಲೆ ವಾಯುಪಡೆ ಬಸ್ ಸಾಗುತ್ತಿರುವಾಗ ಉಗ್ರಗಾಮಿಗಳು ಹುದುಗಿಸಿಟ್ಟದ್ದ ಬಾಂಬ್‌‌ ಸ್ಫೋಟಗೊಂಡು ವಾಹನದ ಭಾಗ ಛಿದ್ರಛಿದ್ರ ವಾಗಿ ರಕ್ತದೋಕಳಿ ಹರಿದಿತ್ತು ಎಂದು ಪ್ರತ್ಯಕ್ಷದರ್ಶಿ ಛಾಯಾಗ್ರಾಹಕರೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತರಾದ 13 ಮಂದಿಯ ಶವಗಳನ್ನು ಹಾಗೂ ಗಾಯಾಳುಗಳಾದ 11 ಜನರನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿ ಖಾನ್ ಅಬ್ಬಾಸ್ ತಿಳಿಸಿದ್ದಾರೆ.

ಘಟನೆಯ ತೀವ್ರತೆಯನ್ನು ನೋಡಿದಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಬಹುದಾಗಿದೆ ಎಂದು ನಾರ್ಥ್ ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಮಲಿಕ್ ನವೀದ್ ಖಾನ್ ತಿಳಿಸಿದ್ದಾರೆ.
ಮತ್ತಷ್ಟು
ಮುಷರಫ್‌ಗೆ ವಾಗ್ದಂಡನೆ: ಮಹತ್ವದ ಅಧಿವೇಶನ ಆರಂಭ
ಶ್ರೀಲಂಕಾ: ಸೇನಾ ಕಾರ್ಯಾಚರಣೆಯಲ್ಲಿ 50 ಉಗ್ರರ ಬಲಿ
ಜಾರ್ಜಿಯಾದ ಮೇಲೆ ರಶ್ಯಾ ವೈಮಾನಿಕ ದಾಳಿ
ಮುಷರಫ್‌ ರಾಜೀನಾಮೆಗೆ ವಿರೋಧಿಗಳ ಒತ್ತಾಯ
ಅಮೆರಿಕ ಹಣವನ್ನು ದುರ್ಬಳಕೆ ಮಾಡಿಲ್ಲ -ಮುಷರಫ್
ತಾಲಿಬಾನ್‌‍ಗೆ ಐಎಸ್‌ಐ ಬೆಂಬಲ -ನ್ಯಾಟೋ