ಅಮೆರಿಕದ ಪರವಾಗಿ ಪಾಕಿಸ್ತಾನವನ್ನು ಅತಂತ್ರಗೊಳಿಸಲು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಪ್ರಯತ್ನಿಸುತ್ತಿದ್ದಾರೆ ಎಂದು ಅಲ್-ಖೈದಾದ ದ್ವಿತೀಯಸ್ತರದ ನಾಯಕ ಅಯಮಾನ್ ಅಲ್ ಜವಾಹಿರಿ ಬಿಡುಗಡೆ ಮಾಡಿದ ಆಡಿಯೋ ಟೇಪ್‌ನಲ್ಲಿ ಆಪಾದಿಸಲಾಗಿದೆ.
ಅಲ್-ಖೈದಾದ ಎರಡನೇ ವರಿಷ್ಠ ನಾಯಕ ಅಯಮಾನ್ ಅಲ್ ಜವಾಹಿರಿ ಬಿಡುಗಡೆ ಮಾಡಿದ ಇಂಗ್ಲೀಷ್ ಭಾಷೆಯಲ್ಲಿರುವ ಆಡಿಯೋ ಟೇಪ್ ಸ್ಥಳಿಯ ಚಾನೆಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ನೀಡಿದ್ದಾನೆ. ಆದರೆ ಇದು ಅಧಿಕೃತವೇ ಎಂಬುದನ್ನು ಇಲ್ಲಿಯವರೆಗೆ ಪರಶೀಲನೆ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ.
ಅಮೆರಿಕವನ್ನು ಸಂತುಷ್ಟಗೊಳಿಸಲು ಪಾಕಿಸ್ತಾನದ ಅಣು ವಿಜ್ಞಾನಿ ಅಬ್ದುಲ್ ಖಾದರ್ ಖಾನ್ ಅವರನ್ನು ಮುಷರಫ್ ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ ಎಂದು ಜವಾಹಿರಿ ಆರೋಪಿಸಿದ್ದಾರೆ.
|