ಇಂಡೋನೇಶಿಯಾದ ಪೂರ್ವಿಯ ಭಾಗದಲ್ಲಿ 5.5 ಮತ್ತು 5.2 ರಿಕ್ಟರ್ ಪ್ರಮಾಣದ ಎರಡು ಲಘು ಭೂಕಂಪಗಳ ಸಂಭವಿಸಿವೆ ಎಂದು ಭೂಗರ್ಭ ಇಲಾಖೆ ಪ್ರಕಟಿಸಿವೆ.
ಭೂಕಂಪದ ಪ್ರಮಾಣ ಅಲ್ಪವಾಗಿದ್ದರಿಂದ ಇಲ್ಲಿಯವರೆಗೆಯಾವುದೇ ಸಾವು ನೋವುಗಳಾದ ಘಟನೆ ವರದಿಯಾಗಿಲ್ಲವೆಂದು ಇಲಾಖೆ ಸ್ಪಷ್ಟಪಡಿಸಿದೆ.
ಇಂಡೋನೇಶ್ಯಾದ ಐರಿಯನ್ ಪ್ರಾಂತ್ಯದ ಪೂರ್ವಿಯ ಭಾಗದಲ್ಲಿ ಬೆಳಗಿನ 2.07 ನಿಮಿಷಕ್ಕೆ 5.5 ರಿಕ್ಟರ್ ಪ್ರಮಾಣದ ಮೊದಲ ಭೂಕಂಪ ಸಂಭವಿಸಿದ್ದು, ಮೂರು ಗಂಟೆಗಳ ನಂತರ ಮಲುಕು ಪ್ರಾಂತ್ಯದಲ್ಲಿ 5.2 ರಿಕ್ಟರ್ ಪ್ರಮಾಣದ ಎರಡನೇ ಭೂಕಂಪ ಸಂಭವಿಸಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ
ಎರಡು ಖಂಡಗಳು ಸೇರುವ, ಜ್ವಾಲಾಮುಖಿ ಚಲನೆಯ ಪ್ರದೇಶದಲ್ಲಿರುವುದರಿಂದ ಇಂಡೋನೇಷಿಯಾ ದೇಶ ಭೂಕಂಪ ಪೀಡಿತವಾಗಿದೆ ಎಂದು ಭೂಗರ್ಭ ಇಲಾಖೆ ಮಾಹಿತಿ ನೀಡಿದೆ.
|