ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜೆಡ್ಡಾದಲ್ಲಿ ಅನೀಸ್ ಇಬ್ರಾಹಿಂ ಬಂಧನ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡ್ಡಾದಲ್ಲಿ ಅನೀಸ್ ಇಬ್ರಾಹಿಂ ಬಂಧನ?
ಸೌದಿ ಅರೇಬಿಯಾ : ಕುಖ್ಯಾತ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಸೋದರ ಅನೀಸ್ ಇಬ್ರಾಹಿಂನನ್ನು ಬಂಧಿಸಲಾಗಿದೆಯೆಂದು ವರದಿಯಾಗಿದೆ. ಅನೀಸ್ ಅವರ ವಿರುದ್ಧ ನಕಲಿ ಪಾಸ್ ಪೊರ್ಟ್ ಹೊಂದಿದ್ದ ಆರೋಪವನ್ನು ಹೊರೆಸಲಾಗಿದೆ.

ಇಂಟರ್ ಪೋಲ್ ನೆರವಿನಿಂದ ಅನೀಸ್‌ನನ್ನು ಬಂಧಿಸಲಾಯಿತು ಎಂದು ಜೆಡ್ಡಾ ವಿಮಾನನಿಲ್ದಾಣದ ಪೊಲೀಸರು ತಿಳಿಸಿದ್ದಾರೆ. ಮುಂಬೈನಲ್ಲಿ ಸಂಭವಿಸಿದ ಭೀಕರ ಸರಣಿ ಸ್ಫೋಟದ ಆರೋಪವಲ್ಲದೇ ಅನೇಕ ಪ್ರಕರಣಗಳಲ್ಲಿ ಅನೀಸ್ ಪೊಲೀಸರಿಗೆ ಬೇಕಾಗಿದ್ದ.

ಈ ಹಿಂದೆ ಅನೀಸ್ ಎರಡು ಬಾರಿ ಬಂಧಿತನಾಗಿದ್ದರೂ ಪೊಲೀಸರು ಅವನನ್ನು ಭಾರತಕ್ಕೆ ಕರೆತರುವಲ್ಲಿ ವಿಫಲರಾಗಿದ್ದರು. 1993 ರ ಮುಂಬೈ ಸರಣಿಸ್ಫೋಟ ಸೂತ್ರಧಾರಿ ಅನೀಸ್ ಇಬ್ರಾಹಿಂನನ್ನು ಹಿಡಿಯಲು ಭಾರತ ಸರ್ಕಾರ ಇಂಟರ್‌ಪೋಲ್ ನೆರವು ಕೇಳಿತ್ತು.

ಆದರೆ ಭಾರತ ಸೌದಿ ಅರೇಬಿಯದ ಜತೆ ಅಪರಾಧಿಗಳ ಹಸ್ತಾಂತರ ಒಪ್ಪಂದವನ್ನು ಭಾರತ ಮಾಡಿಕೊಂಡಿಲ್ಲ. ಆದರೆ ಸೌಹಾರ್ದ ಸಂಬಂಧದ ಹಿನ್ನೆಲೆಯಲ್ಲಿ ಅನೀಸ್‌ನನ್ನು ಹಸ್ತಾಂತರ ಮಾಡಬಹುದೆಂದು ಭಾರತ ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಮತ್ತಷ್ಟು
ಎನ್‌ಡಬ್ಲೂಎಫ್‌ಪಿಯಲ್ಲೂ ಮುಷರಫ್ ವಿರುದ್ಧ ಮಸೂದೆ
ಮುಷರಫ್ ವಿರುದ್ಧ ಅಲ್‌ಖೈದಾ ಕಿಡಿ
ಪಾಕ್ ಬುಡಕಟ್ಟು ಪ್ರದೇಶದಲ್ಲಿ 50 ಉಗ್ರರ ಹತ್ಯೆ
ಮುಷರಫ್‌ಗೆ ವಾಗ್ದಂಡನೆ: ಮಹತ್ವದ ಅಧಿವೇಶನ ಆರಂಭ
ಶ್ರೀಲಂಕಾ: ಸೇನಾ ಕಾರ್ಯಾಚರಣೆಯಲ್ಲಿ 50 ಉಗ್ರರ ಬಲಿ
ಜಾರ್ಜಿಯಾದ ಮೇಲೆ ರಶ್ಯಾ ವೈಮಾನಿಕ ದಾಳಿ