ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್ ವಿರುದ್ಧ ವಾಗ್ದಂಡನೆಗೆ ಪಂಜಾಬ್ ಅನುಮೋದನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ವಿರುದ್ಧ ವಾಗ್ದಂಡನೆಗೆ ಪಂಜಾಬ್ ಅನುಮೋದನೆ
ವಿಶ್ವಾಸಮತ ಯಾಚನೆ ಮಾಡುವಂತೆ ಪರ್ವೇಜ್ ಮುಷರಫ್ ಅವರನ್ನು ಕೋರಿದ ನಿರ್ಣಯಕ್ಕೆ ಪಾಕಿಸ್ತಾನದ ಪಂಜಾಬ್ ವಿಧಾನಸಭೆ ಅನುಮೋದಿಸಿದೆ.

ಮುಷರಫ್ ವಿರುದ್ಧ ದುರ್ನಡತೆ, ಸಂವಿಧಾನ ಉಲ್ಲಂಘನೆ ಮತ್ತು ಹಣಕಾಸು ಅವ್ಯವಹಾರಗಳ ಆರೋಪದ ಬಗ್ಗೆ ಪಾಕಿಸ್ತಾನ ಸಮ್ಮಿಶ್ರ ಸರ್ಕಾರವು ವಾಗ್ಡಂಡನೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಆದಾಗ್ಯೂ, ಮಂಗಳವಾರ ಸಂಜೆ 5ಗಂಟೆವರೆಗೆ ಸಮಾವೇಶವನ್ನು ಮುಂದೂಡಲಾಗಿದೆ.ವಾಗ್ದಂಡನೆ ಪ್ರಕ್ರಿಯೆಯು ಎರಡರಿಂದ ಮ‌ೂರುವಾರಗಳನ್ನು ತೆಗೆದುಕೊಳ್ಳಲಿದೆ. ಮುಷರಫ್ ವಿರುದ್ಧ ಆರೋಪಪಟ್ಟಿಗೆ ಅಂತಿಮರೂಪ ನೀಡಲು ಪಿಪಿಪಿ ಮತ್ತು ಪಿಎಂಎಲ್-ಎನ್ ಜಂಟಿ ಸಭೆ ನಡೆಯಲಿದ್ದು, ಮುಷರಫ್ ವಿರುದ್ಧ 100 ಆರೋಪಗಳನ್ನು ಪಟ್ಟಿಮಾಡುವರೆಂದು ನಿರೀಕ್ಷಿಸಲಾಗಿದೆ.

ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ಮಾಡುವಂತೆ ಅಥವಾ ಅಧಿಕಾರವನ್ನು ತ್ಯಜಿಸುವಂತೆ ಕೋರಿದ ನಿರ್ಣಯಕ್ಕೆ ಪಂಜಾಬ್ ಪ್ರಾಂತೀಯ ಅಸೆಂಬ್ಲಿ ಸರ್ವಾನುಮತದ ಬೆಂಬಲ ನೀಡಿದ ಬಳಿಕ ಮುಷರಫ್ ವಿರುದ್ಧ ವಾಗ್ದಂಡನೆಗೆ ಅನುಮೋದನೆ ದೊರೆತಂತಾಗಿದೆ.
ಮತ್ತಷ್ಟು
ಜೆಡ್ಡಾದಲ್ಲಿ ಅನೀಸ್ ಇಬ್ರಾಹಿಂ ಬಂಧನ?
ಎನ್‌ಡಬ್ಲೂಎಫ್‌ಪಿಯಲ್ಲೂ ಮುಷರಫ್ ವಿರುದ್ಧ ಮಸೂದೆ
ಮುಷರಫ್ ವಿರುದ್ಧ ಅಲ್‌ಖೈದಾ ಕಿಡಿ
ಪಾಕ್ ಬುಡಕಟ್ಟು ಪ್ರದೇಶದಲ್ಲಿ 50 ಉಗ್ರರ ಹತ್ಯೆ
ಮುಷರಫ್‌ಗೆ ವಾಗ್ದಂಡನೆ: ಮಹತ್ವದ ಅಧಿವೇಶನ ಆರಂಭ
ಶ್ರೀಲಂಕಾ: ಸೇನಾ ಕಾರ್ಯಾಚರಣೆಯಲ್ಲಿ 50 ಉಗ್ರರ ಬಲಿ