ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪೇಶಾವರ್‌ನಲ್ಲಿ ಬಾಂಬ್ ಸ್ಫೋಟ: 18 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೇಶಾವರ್‌ನಲ್ಲಿ ಬಾಂಬ್ ಸ್ಫೋಟ: 18 ಸಾವು
ಪಾಕಿಸ್ತಾನದ ಆಗ್ನೆಯ ಭಾಗದಲ್ಲಿರುವ ಪೇಶಾವರ್‌ನಲ್ಲಿ ವಾಯುಪಡೆಗಳ ಬಸ್‌‌ ಮೇಲೆ ತಾಲಿಬಾನ್ ಉಗ್ರಗಾಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ 18 ಮಂದಿ ಮೃತರಾಗಿ,11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಹೊರವಲಯದಲ್ಲಿರುವ ಸೇತುವೆಯ ಮೇಲೆ ವಾಯುಪಡೆ ಬಸ್ ಸಾಗುತ್ತಿರುವಾಗ ತಾಲಿಬಾನ್ ಉಗ್ರಗಾಮಿಗಳು ಹುದುಗಿಸಿಟ್ಟದ್ದ ಬಾಂಬ್‌‌ ಸ್ಫೋಟಗೊಂಡು ವಾಹನದ ಭಾಗ ಛಿದ್ರ ಛಿದ್ರ ವಾಗಿ ರಕ್ತದೊಕಳಿ ಹರಿದಿತ್ತು ಎಂದು ಪ್ರತ್ಯಕ್ಷದರ್ಶಿಯಾದ ಛಾಯಾಗ್ರಾಹಕ ತಿಳಿಸಿದ್ದಾರೆ.

ಘಟನೆಯಲ್ಲಿ ಮೃತರಾದ 18 ಮಂದಿಯ ಶವಗಳನ್ನು ಹಾಗೂ ಗಾಯಾಳುಗಳಾದ 11 ಜನರನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿ ಖಾನ್ ಅಬ್ಬಾಸ್ ತಿಳಿಸಿದ್ದಾರೆ.

ಘಟನೆಯ ತೀವ್ರತೆಯನ್ನು ನೋಡಿದಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಬಹುದಾಗಿದೆ ಎಂದು ನಾರ್ಥ್ ವೆಸ್ಟ್ ಫ್ರೆಂಟೈಯರ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಮಲಿಕ್ ನವೀದ್ ಖಾನ್ ತಿಳಿಸಿದ್ದಾರೆ.

ನಮಗೆ ಬಂದ ಮಾಹಿತಿಯಂತೆ ಭದ್ರತಾಪಡೆಗಳ ವಾಹನವನ್ನು ಅತ್ಯಾಧುನಿಕ ಬಾಂಬ್‌ಸ್ಫೋಟಕವನ್ನು ಸೇತುವೆಯ ಕೆಳೆಗೆ ಉಗ್ರಗಾಮಿಗಳು ಹುದುಗಿಸಿಟ್ಟಿದ್ದರು ಎಂದು ಪೊಲೀಸ್ ಮುಖ್ಯಸ್ಥ ಖಾನ್ ತಿಳಿಸಿದ್ದಾರೆ.
ಮತ್ತಷ್ಟು
ಮುಷರಫ್ ವಿರುದ್ಧ ವಾಗ್ದಂಡನೆಗೆ ಪಂಜಾಬ್ ಅನುಮೋದನೆ
ಜೆಡ್ಡಾದಲ್ಲಿ ಅನೀಸ್ ಇಬ್ರಾಹಿಂ ಬಂಧನ?
ಇಂಡೋನೇಶ್ಯಾದಲ್ಲಿ ಲಘು ಭೂಕಂಪ
ಎನ್‌ಡಬ್ಲೂಎಫ್‌ಪಿಯಲ್ಲೂ ಮುಷರಫ್ ವಿರುದ್ಧ ಮಸೂದೆ
ಮುಷರಫ್ ವಿರುದ್ಧ ಅಲ್‌ಖೈದಾ ಕಿಡಿ
ಪಾಕ್ ಬುಡಕಟ್ಟು ಪ್ರದೇಶದಲ್ಲಿ 50 ಉಗ್ರರ ಹತ್ಯೆ