ಮಾಸ್ಕೋ : ಟಿಬ್ಲಿಸಿಯನ್ನು ಶಿಕ್ಷಿಸುವ ಕಾರ್ಯ ಅಂತ್ಯಗೊಂಡಿದ್ದರಿಂದ ಜಾರ್ಜಿಯಾ ವಿರುದ್ದದ ದಾಳಿಯನ್ನು ನಿಲ್ಲಿಸುವಂತೆ ಸೇನಾಪಡೆಗಳಿಗೆ ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಆದೇಶ ನೀಡಿದ್ದಾರೆ.
ಶಾಂತಿ ಮಾತುಕತೆಗಾಗಿ ಕ್ರೆಮ್ಲಿನ್‌ಗೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸುರ್ಕೋಜಿ ಅವರ ಭೇಟಿಗಿಂತ ಮುಂಚೆ ರಷ್ಯಾ ಅಧ್ಯಕ್ಷ ಮೆಡ್ವೆಡೇವ್ ರಕ್ಷಣಾ ಸಚಿವ ಅನಾಟೊಲಿಯವರಿಗೆ ಜಾರ್ಜಿಯಾದ ವಿರುದ್ದ ಯುದ್ದ ನಿಲ್ಲಿಸುವಂತೆ ಆದೇಶ ನೀಡಿದರು.
ನಾವು ಸಾಧಿಸಬೇಕಾದ ಗುರಿಯನ್ನು ಸಾಧಿಸಿದ್ದೇವೆ. ಎದುರಾಳಿಗಳಿಗೆ ಭರಿಸಲಾರದಂತಹ ಹಾನಿಯನ್ನು ನೀಡಿದ್ದೇವೆ ಎಂದು ಅಧ್ಯಕ್ಷ ಮೆಡ್ವೆಡೇವ್ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಮೆರಿಕ ಬೆಂಬಲಿತ ಜಾರ್ಜಿಯಾ ರಷ್ಯಾ ಪರ ಪ್ರಾಂತ್ಯವಾದ ಸೌತ್ ಒಸ್ಸೆಟಿಯಾ ವಶಕ್ಕೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಷ್ಯಾ ಭಾರಿ ಪ್ರಮಾಣದ ದಾಳಿ ನಡೆಸಿ ಹಿಮ್ಮೆಟ್ಟಿಸಿತು.
ರಷ್ಯಾ ಶಾಂತಿಗೆ ಬದ್ದವಾಗಿದೆ ಎನ್ನುವುದಕ್ಕೆ ಇನ್ನು ಹೆಚ್ಚಿನ ಸಾಕ್ಷ್ಯಧಾಕಗಳ ಅವಶ್ಯಕತೆಯಿದೆ. ಶಾಂತಿ ಒಪ್ಪಂದಕ್ಕೆ ಹಸ್ಾಕ್ಷರ ಹಾಕುವವರೆಗೆ ನಾವು ಸಿದ್ದತೆಯಲ್ಲಿರುತ್ತೇವೆ ಎಂದು ಜಾರ್ಜಿಯಾದ ಪ್ರಧಾನಿ ಲಾಡೊ ಗುರ್ಗೆನಿಡ್ಜ್ ಸ್ಪಷ್ಟಪಡಿಸಿದ್ದಾರೆ.
|