ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಗಸ್ಟ್ 14ರಂದು ಮುಷರಫ್ ರಾಜೀನಾಮೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಗಸ್ಟ್ 14ರಂದು ಮುಷರಫ್ ರಾಜೀನಾಮೆ?
ಇಸ್ಲಾಮಾಬಾದ್ : ಆಡಳಿತಾರೂಢ ಸಮ್ಮಿಶ್ರ ಪಕ್ಷಗಳಿಂದ ವಾಗ್ದಂಡನೆಗೆ ಗುರಿಯಾಗುತ್ತಿರುವ ಪಾಕ್ ಅಧ್ಯಕ್ಷ ಪರ್ವೆಜ್ ಮುಷರಫ್, ಅಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ ಪಡೆದ ದಿನವಾಗಿದ್ದರಿಂದ ಅಂದೇ ರಾಜೀನಾಮೆ ನೀಡಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಷರಫ್ ರಾಜೀನಾಮೆಯನ್ನು ನೀಡಿದಲ್ಲಿ ಸುರಕ್ಷಿತವಾಗಿ ತೆರಳಲು ಅವಕಾಶ ಮಾಡಿಕೊಡುವುದಕ್ಕೆ ಪಕ್ಷಗಳು ಬದ್ಧವಾಗಿವೆ ಎಂದು ಸರಕಾರ ಹಾಗೂ ಮುಷರಫ್ ಆತ್ಮಿಯ ಮೂಲಗಳು ತಿಳಿಸಿವೆ.

ಮುಷರಫ್ ಅಗಸ್ಟ್ 14ರೊಳಗಾಗಿ ಅಥವಾ 14ರ ನಂತರ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ಈ ಕುರಿತಂತೆ ಒಂದೆರಡು ದಿನಗಳಲ್ಲಿ ಪ್ರಕಟಣೆ ಹೊರಬೀಳುವ ಸಾಧ್ಯತೆಗಳಿವೆ ಎಂದು ಪಿಎಂಎಲ್‌(ಕ್ಯೂ) ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.

ಮುಂಬರುವ ವಾರದಲ್ಲಿ ನಡೆಯುವ ಸಂಸತ್ತಿನ ಅಧಿವೇಶನದಲ್ಲಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧ ವಾಗ್ದಂಡನೆ ವಿಧಿಸಲು ನಿರ್ಧರಿಸಲಾಗಿದೆ ಎಂದು ಗಿಲಾನಿ ನೇತೃತ್ವದ ಸರಕಾರ ಪ್ರಕಟಿಸಿದೆ. ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳ ಶಾಸನಸಭೆಗಳಲ್ಲಿ ಎರಡು ಪ್ರಾಂತೀಯ ಶಾಸನಸಭೆಗಳು, ಮುಷರಫ್ ಸಂಸತ್ತಿನಲ್ಲಿ ವಿಶ್ವಾಸಮತ ಕೋರಬೇಕು ಎಂಬ ಮಸೂದೆಯನ್ನು ಅಂಗೀಕರಿಸಿವೆ.
ಮತ್ತಷ್ಟು
ಜಾರ್ಜಿಯಾದ ವಿರುದ್ದ ದಾಳಿ ಸ್ಥಗಿತಕ್ಕೆ ಮೆಡ್ವಡೇವ್ ಆದೇಶ
ಪೇಶಾವರ್‌ನಲ್ಲಿ ಬಾಂಬ್ ಸ್ಫೋಟ: 18 ಸಾವು
ಮುಷರಫ್ ವಿರುದ್ಧ ವಾಗ್ದಂಡನೆಗೆ ಪಂಜಾಬ್ ಅನುಮೋದನೆ
ಜೆಡ್ಡಾದಲ್ಲಿ ಅನೀಸ್ ಇಬ್ರಾಹಿಂ ಬಂಧನ?
ಇಂಡೋನೇಶ್ಯಾದಲ್ಲಿ ಲಘು ಭೂಕಂಪ
ಎನ್‌ಡಬ್ಲೂಎಫ್‌ಪಿಯಲ್ಲೂ ಮುಷರಫ್ ವಿರುದ್ಧ ಮಸೂದೆ