"ಜಮ್ಮು ಕಾಶ್ಮಿರದ ಜನತೆಯ ವಿರುದ್ದ ಹೆಚ್ಚುವರಿ ಸೇನೆಯನ್ನು ಬಳಸುತ್ತಿರುವುದು ತೀವ್ರ ಖಂಡನೀಯ. ಕೂಡಲೇ ಹಿಂಸಾಚಾರವನ್ನು ಅಂತ್ಯಗೊಳಿಸಬೇಕು" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಒತ್ತಾಯಿಸಿದ್ದಾರೆ.
ಕಳೆದ ಸೋಮವಾರದಂದು ಜಮ್ಮು ಕಾಶ್ಮಿರ ರಾಜ್ಯದಲ್ಲಿ ಹೆಚ್ಚುವರಿ ಸೇನೆಯನ್ನು ಬಳಸಿಕೊಂಡು ಮುಸ್ಲಿಂರ ಮೇಲೆ ದಾಳಿ ನಡೆಸುತ್ತಿರುವುದಲ್ಲದೇ ಅವರ ಆಸ್ತಿಪಾಸ್ತಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದ ನಂತರ, ಇದೀಗ ಎರಡನೇ ಬಾರಿಗೆ ಜಮ್ಮುಕಾಶ್ಮಿರದಲ್ಲಿ ಹೆಚ್ಚುವರಿ ಸೇನೆಯ ಬಳಕೆಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಹುರಿಯತ್ ಕಾನ್ಫ್‌ರೆನ್ಸ್ ನಾಯಕ ಶೇಖ್ ಅಬ್ದುಲ್ ಅಜೀಜ್ ಗುಂಡಿಗೆ ಬಲಿಯಾಗಿರುವುದಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಶೋಕವ್ಯಕ್ತಪಡಿಸಿದ್ದಾರೆ.
ಹುರಿಯತ್ ಕಾನ್ಫ್‌ರೆನ್ಸ್ ನಾಯಕ ಶೇಖ್ ಅಬ್ದುಲ್ ಅಜೀಜ್ ಅವರ ಕುಟುಂಬಕ್ಕೆ ಹಾಗೂ ಕಾಶ್ಮಿರ ಜನತೆಗೆ ಸಂತಾಪ ಸೂಚಿಸುತ್ತೇವೆ, ಜಮ್ಮುಕಾಶ್ಮಿರದಲ್ಲಿ ಹೆಚ್ಚುವರಿ ಸೇನೆ ಬಳಕೆಯನ್ನು ಪಾಕ್ ಈಗಾಗಲೇ ಖಂಡಿಸಿದೆ ಎಂದು ಪಾಕ್ ಖುರೇಶಿ ತಿಳಿಸಿದ್ದಾರೆ.
|