ಶ್ರೀಲಂಕದ ಉತ್ತರೀಯ ಭಾಗದಲ್ಲಿ ಸೇನಾಪಡೆಗಳು ಮತ್ತು ತಮಿಳು ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ 15 ಉಗ್ರರು ಹಾಗೂ ಒಬ್ಬ ಸೈನಿಕ ಸಾವನ್ನಪ್ಪಿದ್ದಾನೆ ಎಂದು ರಕ್ಷಣಾ ಸಚಿವಾಲಯ ಮೂಲಗಳು ತಿಳಿಸಿವೆ.
ಉಗ್ರರ ಬಂಕರಗಳನ್ನು ನಾಶ ಮಾಡಿ ವಾಯುನಿಯಾ ವೆಲಿ ಓಯಾ ಮತ್ತು ಮುಲ್ಲೈತೀವು ಪ್ರದೇಶದಲ್ಲಿ ಉಗ್ರರನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ಜನೆವರಿ ತಿಂಗಳಿನಿಂದ ಸೇನಾಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಇಲ್ಲಿಯವರೆಗೆ 5,786 ತಮಿಳು ಉಗ್ರರು ಸಾವನ್ನಪ್ಪಿದ್ಗು 529 ಸೈನಿಕರು ಮೃತರಾಗಿದ್ದಾರೆ ಎಂದು ಸೇನಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾದ ಪೂರ್ವಿಯ ಹಾಗೂ ಉತ್ತರ ಭಾಗವನ್ನು ಅಲ್ಪಸಂಖ್ಯಾತರಾದ ತಮಿಳರಿಗೆ ಪ್ರತ್ಯೆಕ ತಮಿಳು ರಾಷ್ಟ್ರ ಸ್ಥಾಪನೆಗಾಗಿ ನಡೆಸುತ್ತಿರುವ ಹೋರಾಟದಲ್ಲಿ 1972 ರಿಂದ ಇಲ್ಲಿಯವರೆಗೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಬಲಿಯಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.
|