ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷ್ ವಾಗ್ದಂಡನೆಯಲ್ಲಿ ಅಮೆರಿಕ ಹಸ್ತಕ್ಷೇಪ-ನವಾಜ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷ್ ವಾಗ್ದಂಡನೆಯಲ್ಲಿ ಅಮೆರಿಕ ಹಸ್ತಕ್ಷೇಪ-ನವಾಜ್
ರಾಷ್ಟ್ರಾಧ್ಯಕ್ಷ ಪರ್ವೆಜ್ ಮುಷರಫ್ ಅವರಿಗೆ ವಾಗ್ದಂಡನೆ ವಿಧಿಸುವ ದೇಶದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಟಿವಿ. ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಆಪಾದಿಸಿದ್ದಾರೆ.

ತಾನು ರಾಷ್ಟ್ರಾಧ್ಯಕ್ಷ ಹುದ್ದೆಯ ಅಕಾಂಕ್ಷಿ ಎನ್ನುವುದನ್ನು ತಳ್ಳಿಹಾಕಿದ ನವಾಜ್, ತಮ್ಮ ಪಕ್ಷ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಂದಿನ ರಾಷ್ಟ್ರಪತಿ ಯಾರೆಂಬುದನ್ನು ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಸ್ಥಿರ ಪ್ರಜಾಪ್ರಭುತ್ವಕ್ಕಾಗಿ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಪಿಪಿಪಿಗೆ ಬೆಂಬಲ ಮುಂದುವರಿಸಿಕೊಂಡು ಹೋಗುವುದಾಗಿ ಮಾಜಿ ಪ್ರಧಾನಿ ನವಾಜ್ ಷರೀಪ್ ತಿಳಿಸಿದ್ದಾರೆ.

ಅಮಾನತುಗೊಂಡ ನ್ಯಾಯಾಧೀಶರ ಮರುನೇಮಕ ಪಕ್ಷದ ಪ್ರಮುಖ ಆದ್ಯತೆಯಾಗಿದ್ದು, ನ್ಯಾಯಾಧೀಶರ ಮರುನೇಮಕ ಕುರಿತಂತೆ ಅಶ್ವಾಸನೆಯ ನಂತರ ತಮ್ಮ ಪಕ್ಷವು ಸಚಿವ ಸಂಪುಟವನ್ನು ಸೇರಲು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ನವಾಜ್ ತಿಳಿಸಿದ್ದಾರೆ.
ಮತ್ತಷ್ಟು
ಪಾಕ್: ಸ್ವಾತಂತ್ರ್ಯ ಪ್ರಯುಕ್ತ 35 ಕೈದಿಗಳ ಬಿಡುಗಡೆ
ಶ್ರೀಲಂಕಾ: ಘರ್ಷಣೆಯಲ್ಲಿ 15 ಉಗ್ರರ ಸಾವು
ಟ್ರಿಪೊಲಿಯಲ್ಲಿ ಬಾಂಬ್‌ಸ್ಫೋಟ: 18 ಸಾವು
ಕಾಶ್ಮಿರದಲ್ಲಿ ಹೆಚ್ಚುವರಿ ಸೇನೆ ಬಳಕೆಗೆ ಪಾಕ್ ಖಂಡನೆ
ಪಾಕ್ : ಕ್ಷಿಪಣಿ ದಾಳಿಗೆ 10 ಉಗ್ರರ ಬಲಿ
ಅಮೆರಿಕ ದಾಳಿಗೆ ಅಲ್-ಖೈದಾ ತರಬೇತಿ: ಯುಎಸ್