ಜಮ್ಮು ಕಾಶ್ಮೀರ ವಿಷಯದಿಂದ ದೂರವಿರುವಂತೆ ಭಾರತ ಪಾಕ್ಗೆ ಅಧಿಕೃತ ಹೇಳಿಕೆ ನೀಡಿದ ನಂತರ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಪ್, ಪ್ರತಿಯೊಬ್ಬ ಪಾಕಿಸ್ತಾನಿಯರ ಹೃದಯದಲ್ಲಿ ಕಾಶ್ಮೀರವು ಮಿಡಿಯುತ್ತಿದೆ ಎಂದು ಹೇಳಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಖಂಡಿಸಿದ ಅವರು, ಪ್ರತಿಯೊಬ್ಬ ಪಾಕಿಸ್ತಾನಿಗ ಕಾಶ್ಮೀರದಲ್ಲಿರುವ ಸಹೋದರ ಸಹೋದರಿಯರೊಂದಿಗಿದ್ದಾರೆ ಎಂದು ಮುಷರಫ್ ಹೇಳಿದ್ದಾರೆ.
"ಶ್ರೀನಗರದಲ್ಲಿ ಏನು ಸಂಭವಿಸುತ್ತಿದೆ ಎಂದು ಹೇಳದಿದ್ದಲ್ಲಿ ನನ್ನ ಭಾಷಣವು ಪರಿಪೂರ್ಣವಾಗುವುದಿಲ್ಲ. ಕಳೆದ ಕೆಲವು ದಿನಗಳಿಂದ ಶ್ರೀನಗರ ಮತ್ತು ಕಾಶ್ಮೀರದಲ್ಲಿ ಹುರಿಯತ್ ನಾಯಕ ಶೇಖ್ ಅಬ್ದುಲ್ ಅಜೀಜ್ ಸೇರಿದಂತೆ 22 ಅಮಾಯಕರನ್ನು ಹತ್ಯೆ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಇದನ್ನು ನಾನು ಖಂಡಿಸುತ್ತೇನೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಪಾಕಿಸ್ತಾನಿಯೂ, ಕಾಶ್ಮೀರದ ತನ್ನ ಸಹೋದರ ಸಹೋದರಿಯರ ಜತೆಗಿದ್ದಾನೆ ಎಂಬುದರಲ್ಲಿ ಸಂಶಯವಿಲ್ಲ. ಪ್ರತಿ ಪಾಕಿಸ್ತಾನಿಗನ ಹೃದಯದಲ್ಲಿ ಕಾಶ್ಮೀರ ಮಿಡಿಯುತ್ತಿದೆ ಮತ್ತು ಕಾಶ್ಮೀರವು ಪಾಕಿಸ್ತಾನದ ನರನಾಡಿಯಲ್ಲಿ ಹರಿಯುತ್ತಿದೆ. ಹಾಗಾಗಿ ಪಾಕಿಸ್ತಾನವು ಕಾಶ್ಮೀರ ಜನತೆಯೊಂದಿಗಿದೆ" ಎಂದು ಅವರು ತನ್ನ ಭಾಷಣದಲ್ಲಿ ಹೇಳಿದ್ದಾರೆ.
ಭಾರತೀಯ ಆಂತರಿಕ ವಿಷಯದಲ್ಲಿ ಅಂತಾರಾಷ್ಟ್ರೀಯ ಹಸ್ತಕ್ಷೇಪಕ್ಕೆ ಇಸ್ಲಾಮಾಬಾದ್ ಕರೆ ನೀಡಿರುವುದು ಕಾನೂನು ಬಾಹಿರ ಎಂದು ಭಾರತವು ಈಗಾಗಲೇ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.
|