ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜಗತ್ತಿನ ಅತಿ ಎತ್ತರದ ಮಹಿಳೆ ನಿಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಗತ್ತಿನ ಅತಿ ಎತ್ತರದ ಮಹಿಳೆ ನಿಧನ
ತನ್ನ ಅತಿ ಎತ್ತರದಿಂದಾಗಿ ಗಿನ್ನೆಲೆ ಪುಸ್ತಕದಲ್ಲಿ ದಾಖಲೆ ಬರೆದಿದ್ದ ಮಹಿಳೆ ಸ್ಯಾಂಡಿ ಅಲನ್ ಅಮೆರಿಕದ ಇಂಡಿಯಾನಾದಲ್ಲಿ ನಿಧನಹೊಂದಿದ್ದಾರೆ.

2.31 ಮೀಟರ್ ಎತ್ತರವಿದ್ದ ಸ್ಯಾಂಡಿ ಅಲನ್ , ತಮ್ಮ 53ನೇ ವಯಸ್ಸಿನಲ್ಲಿ ಇಂಡಿಯಾನಾದ ಶೆಲ್‌ಬೈವಿಲ್ಲೆ ನರ್ಸಿಂಗ್ ಹೋಂನಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಯಾಂಡಿ ಅಲನ್ ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ಡಯಾಬೀಟಿಸ್, ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು ಎಂದು ಸ್ಯಾಂಡಿ ಸ್ನೇಹಿತೆಯೊಬ್ಬರು ಮಾಧ್ಯಮದವರಿಗೆ ತಿಳಿಸಿದ್ದಾರೆ,

ಸ್ಯಾಂಡಿ ಅಲನ್ ತಮ್ಮ 10ನೇ ವಯಸ್ಸಿನಲ್ಲಿ 1.90 ಮೀಟರ್‌ಗಿಂತ ಎತ್ತರವಾಗಿದ್ದರು. ಅವರಿಗೆ 1977ರಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿ ಟ್ಯೂಮರ್ ಬೆಳೆದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

"ತಾನು ಜಗತ್ತಿನ ಅತಿ ಎತ್ತರದ ಮಹಿಳೆ ಎಂದು ಗೌರವದಿಂದ ಹೇಳಿಕೊಳ್ಳುತ್ತಿದ್ದರು. ತನ್ನ ಎತ್ತರದಿಂದಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದು ಅನೇಕ ಹಾಲಿವುಡ್ ಚಿತ್ರಗಳಲ್ಲಿ, ಧಾರವಾಹಿಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದರು ಎಂದು ಗಿನ್ನಿಸ್ ಬುಕ್ ಮುಖ್ಯ ಸಂಪಾದಕ ಕ್ರೇಗ್ ಗ್ಲೇಂಡೆ ಹೇಳಿದ್ದಾರೆ.
ಮತ್ತಷ್ಟು
ಸರ್ವಾಧಿಕಾರದ ವಿರುದ್ಧ ಹೋರಾಟಕ್ಕೆ ಗಿಲಾನಿ ಕರೆ
ಪಾಕಿಗರ ಹೃದಯದಲ್ಲಿ ಕಾಶ್ಮೀರ ಮಿಡಿಯುತ್ತಿದೆ: ಮುಷ್
ಪಾಕ್ : ಆತ್ಮಾಹುತಿ ಬಾಂಬ್ ದಾಳಿಗೆ 7 ಬಲಿ
ಮುಷ್ ವಾಗ್ದಂಡನೆಯಲ್ಲಿ ಅಮೆರಿಕ ಹಸ್ತಕ್ಷೇಪ-ನವಾಜ್
ಪಾಕ್: ಸ್ವಾತಂತ್ರ್ಯ ಪ್ರಯುಕ್ತ 35 ಕೈದಿಗಳ ಬಿಡುಗಡೆ
ಶ್ರೀಲಂಕಾ: ಘರ್ಷಣೆಯಲ್ಲಿ 15 ಉಗ್ರರ ಸಾವು