ಕಾಠ್ಮಂಡು : ದೇಶದ ಎರಡು ಪ್ರಮುಖ ಪಕ್ಷಗಳು ಮಾವೊವಾದಿಗಳ ಮುಖಂಡ ಪ್ರಚಂಡಾ ಅವರನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಹುದ್ದೆ ಬಿಕ್ಕಟ್ಟು ಪರಿಹಾರವಾಗಿದ್ದು ಕಳೆದ ನಾಲ್ಕು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಸರಕಾರ ರಚನೆಗೆ ತೆರೆಏಳೆದಂತಾಗಿದೆ.
ಪಕ್ಷ ಮಂಡಿಸಿದ ಏಳು ಷರತ್ತುಗಳಿಗೆ ಮಾವೊವಾದಿಗಳು ಸಮ್ಮತಿಸಿದ್ದರಿಂದ ಒಪ್ಪಂದ ಮಾಡಿಕೊಂಡಿದ್ದು ಸರಕಾರ ರಚನೆಗೆ ಬೆಂಬಲ ನೀಡುತ್ತಿದ್ದೇವೆ ಎಂದು ಸಿಪಿಎನ್-ಯುಎಂಎಲ್ ನಾಯಕ ಈಶ್ವೊರ್ ಪೊಖಾರೆಲ್ ಹೇಳಿದ್ದಾರೆ.
ರಾಜ್ಯಾಧೀಕಾರದ ವಿರುದ್ದ ಕಳೆದ ಒಂದು ದಶಕದ ನಿರಂತರ ಸಶಸ್ತ್ರ ಹೋರಾಟದ ನಂತರ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾವೊವಾದಿಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಏಪ್ರಿಲ್ 10 ರಂದು ಪ್ರಕಟವಾದ ಚುನಾವಣಾ ಫಲಿತಾಂಶ ಮಾವೊವಾದಿಗಳ ಪರ ಬಂದ ನಂತರ ಪುಷ್ಪಾ ಕಲಾಮ್ ದಾಹಲ್ ಅಲಿಯಾಸ್ ಪ್ರಚಂಡಾ(53) ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗಿತ್ತು.
ನಾಳೆ ನಡೆಯಲಿರುವ ಚುನಾವಣೆಯಲ್ಲಿ ಪ್ರಮುಖ ಎರಡು ರಾಜಕೀಯ ಪಕ್ಷಗಳು ಮಾವೊವಾದಿಗಳ ಮುಖಂಡ ಪ್ರಚಂಡಾ ಅವರನ್ನು ಬೆಂಬಲಿಸಿದ್ದರಿಂದ ನೇಪಾಳದ ಮುಂದಿನ ಪ್ರಧಾನಿ ಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
|