ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಗ್ದಾದ್:ಆತ್ಮಾಹುತಿ ದಾಳಿಗೆ 26 ಆಹುತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಗ್ದಾದ್:ಆತ್ಮಾಹುತಿ ದಾಳಿಗೆ 26 ಆಹುತಿ
ದಕ್ಷಿಣ ಬಗ್ದಾದ್‌ನಲ್ಲಿ ಮಹಿಳಾ ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯಲ್ಲಿ 26 ಮಂದಿ ಹತರಾಗಿದ್ದು ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಯಾತ್ರಾರ್ಥಿಗಳು ಕರ್ಬಾಲಕ್ಕೆ ತೆರಳುತ್ತಿರುವಾಗ ನಡೆಸಿರುವ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ. ಯಾತ್ರಾರ್ಥಿಗಳ ಗುಂಪಿನಲ್ಲಿ ಸೇರಿಕೊಂಡಿದ್ದ ಮಹಿಳೆ ತನ್ನನ್ನು ಸ್ಫೋಟಿಸಿಕೊಂಡಿದ್ದಾಳೆ. ಇಸ್ಕಾಂದರಿಯಾ ಎಂಬಲ್ಲಿ ಈ ದಾಳಿ ನಡೆಸಲಾಗಿದೆ. ಮಹಿಳೆಯರು ರಾತ್ರಿಯೂಟ ತಯಾರಿಸುತ್ತಿದ್ದರೆ, ಪುರುಷರು ಪ್ರಾರ್ಥನೆ ನಡೆಸುತ್ತಿದ್ದರು ಮತ್ತು ಮಕ್ಕಳು ಸಮೀಪದಲ್ಲಿ ಆಟವಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ದಾಳಿಯಲ್ಲಿ 26 ಮಂದಿ ಸಾವಿಗೀಡಾಗಿದ್ದು, 75 ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತ್ಯಕ್ಷ ವರದಿಗಳ ಪ್ರಕಾರ ಬಾಂಬರ್ ಓರ್ವ ಮಹಿಳೆ ಆಗಿರಬಹುದು ಎಂದು ಊಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಗ್ದಾದಿನಿಂದ 50 ಕಿ.ಮೀ ದಕ್ಷಿಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಹಿಂದೆ ಫೆ.24ರಂದೂ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಲಾಗಿದ್ದು, ಕನಿಷ್ಠ 40 ಶಿಯಾ ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.
ಮತ್ತಷ್ಟು
ನೇಪಾಳ: ಮುಂದಿನ ಪ್ರಧಾನಿಯಾಗಿ ಪ್ರಚಂಡಾ?
ಜಗತ್ತಿನ ಅತಿ ಎತ್ತರದ ಮಹಿಳೆ ನಿಧನ
ಸರ್ವಾಧಿಕಾರದ ವಿರುದ್ಧ ಹೋರಾಟಕ್ಕೆ ಗಿಲಾನಿ ಕರೆ
ಪಾಕಿಗರ ಹೃದಯದಲ್ಲಿ ಕಾಶ್ಮೀರ ಮಿಡಿಯುತ್ತಿದೆ: ಮುಷ್
ಪಾಕ್ : ಆತ್ಮಾಹುತಿ ಬಾಂಬ್ ದಾಳಿಗೆ 7 ಬಲಿ
ಮುಷ್ ವಾಗ್ದಂಡನೆಯಲ್ಲಿ ಅಮೆರಿಕ ಹಸ್ತಕ್ಷೇಪ-ನವಾಜ್