ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನೇಪಾಳ ಪ್ರಧಾನಿಯಾಗಿ ಪ್ರಚಂಡ ಆಯ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ ಪ್ರಧಾನಿಯಾಗಿ ಪ್ರಚಂಡ ಆಯ್ಕೆ
ಮಾವೋವಾದಿ ಮುಖ್ಯಸ್ಥ ಪ್ರಚಂಡ ಅವರು ಪ್ರಜಾಪ್ರಭುತ್ವ ನೇಪಾಳದ ಪ್ರಥಮ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ರಾಜಪ್ರಭುತ್ವದ ಅಂತ್ಯಕ್ಕಾಗಿ ದಶಕಗಳ ಕಾಲ ಹೋರಾಟ ನಡೆಸಿದ್ದ ಅವರ ಪಕ್ಷವು ನಾಲ್ಕು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಭಾರೀ ವಿಜಯ ಸಾಧಿಸಿತ್ತು. ಆದರೆ ಸರಕಾರ ರಚನೆಗೆ ಬಹುಮತವಿರದಿದ್ದ ಕಾರಣ ಸರಕಾರ ರಚನೆ ಸುದೀರ್ಘ ಕಾಲ ನನೆಗುದಿಗೆ ಬಿದ್ದಿತ್ತು.

ಸಿಪಿಎನ್-ಮಾವೋವಾದಿ ನಾಯಕ, 53ರ ಹರೆಯದ ಪುಷ್ಪ ಕಮಲ್ ದಹಲ್ ಅಲಿಯಾಸ್ ಪ್ರಚಂಡ ಅವರು, 601 ಸ್ಥಾನಗಳ ಸಾಮರ್ಥ್ಯದ ಸಂಸತ್ತಿನಲ್ಲಿ ಚಲಾಯಿತವಾದ 577 ಮತಗಳಲ್ಲಿ 464 ಮತಗಳನ್ನು ಗಳಿಸಿದ್ದಾರೆ. ಇವರಿಗೆ ಇನ್ನೊಂದು ಪ್ರಮುಖ ಎಡಪಕ್ಷವಾದ ಸಿಪಿಎನ್(ಯುಎಂಎಲ್) ಮತ್ತು ತೆರಾಯ್ ಮೂಲದ ಮದೇಶಿ ರೈಟ್ಸ್ ಪೀಪಲ್ಸ್ ಫಾರಂ ಸಹ ಬೆಂಬಲ ನೀಡಿತ್ತು.

ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಶೇರ್ ಬಹಾದೂರ್ ದೇವುಬ ಅವರು ಸರಳ ಬಹುಮತ ಗಳಿಸಲು ವಿಫಲರಾದರು. ಮಾವೋವಾದಿಗಳ ಎದುರು ಅವರ ಪಕ್ಷ ಧೂಳೀಪಟವಾಗಿದ್ದು ಕೇವಲ 113 ಮತಗಳನ್ನು ಮಾತ್ರ ಗಳಿಸಿದ್ದರು.

ನೇಪಾಳದ ಉಸ್ತುವಾರಿ ಪ್ರಧಾನಿಯಾಗಿದ್ದ ಗಿರಿಜಾ ಪ್ರಸಾದ್ ಕೊಯಿರಾಲ ಇದೀಗಾಗಲೇ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಚಂಡ ಅವರು ಪ್ರಧಾನಿಯಾಗಿರುವ ಕಾರಣ ಮಾವೋವಾದಿಗಳು ಮಂತ್ರಿಮಂಡಲದಲ್ಲಿ ಸಿಂಹಪಾಲು ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಮುಂತಾದ ಖಾತೆಗಳು ಮಾವೋವಾದಿಗಳ ಪಾಲಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದೆ ಹಿಂಸಾಚಾರದ ಪ್ರತಿಭಟನೆಯಲ್ಲಿ ತೊಡಗಿದ್ದ ಮಾವೋವಾದಿಗಳು ಬಳಿಕ, ದೊರೆಯ ವಿರುದ್ಧ ನಡೆದ ಸಪ್ತಪಕ್ಷ ಚಳುವಳಿಯಲ್ಲಿ ಸೇರಿಕೊಂಡಿದ್ದರು.
ಮತ್ತಷ್ಟು
ಸ್ಥಾನ ತ್ಯಾಗಕ್ಕೆ ಮುಷರಫ್ ನಿರ್ಧಾರ
ಬಗ್ದಾದ್:ಆತ್ಮಾಹುತಿ ದಾಳಿಗೆ 26 ಆಹುತಿ
ನೇಪಾಳ: ಮುಂದಿನ ಪ್ರಧಾನಿಯಾಗಿ ಪ್ರಚಂಡಾ?
ಜಗತ್ತಿನ ಅತಿ ಎತ್ತರದ ಮಹಿಳೆ ನಿಧನ
ಸರ್ವಾಧಿಕಾರದ ವಿರುದ್ಧ ಹೋರಾಟಕ್ಕೆ ಗಿಲಾನಿ ಕರೆ
ಪಾಕಿಗರ ಹೃದಯದಲ್ಲಿ ಕಾಶ್ಮೀರ ಮಿಡಿಯುತ್ತಿದೆ: ಮುಷ್