ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್ ಸಹಾಯಕ್ಕೆ ಸೌದಿ ದೊರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ಸಹಾಯಕ್ಕೆ ಸೌದಿ ದೊರೆ
PTI
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ವಾಗ್ದಂಡನೆ ವಿಧಿಸಲು ಆಡಳಿತಾರೂಢ ಮೈತ್ರಿಕೂಟಗಳು ಸಿದ್ಧತೆ ನಡೆಸುತ್ತಿರುವಂತೆ, ಬಿಕ್ಕಟ್ಟು ಶಮನಕ್ಕಾಗಿ ಸೌದಿದೊರೆ ರಾಜೀಸಂಧಾನಕ್ಕೆ ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಸೌದಿ ಅರೇಬಿಯಾದ ಗುಪ್ತಚರ ಮುಖ್ಯಸ್ಥರು ಇಸ್ಲಾಮಾಬಾದಿಗೆ ಬಂದಿಳಿದಿದ್ದು, ಅಧ್ಯಕ್ಷ ಮುಷರಫ್ ಹಾಗೂ ಮುಷರಫ್ ಅವರನ್ನು ಬೆಂಬಲಿಸುತ್ತಿರುವ ಪಿಎಂಎಲ್(ಕ್ಯೂ) ಪಕ್ಷದ ಮುಖ್ಯಸ್ಥ ಚೌಧುರಿ ಶುಜಾತ್ ಹುಸೇನ್ ಅವರನ್ನು ಭೇಟಿಮಾಡಿದ್ದಾರೆ.

ವಾಗ್ದಂಡನೆಯಿಂದ ಮುಷರಫ್ ಅವನ್ನು ಬಚಾವ್ ಮಾಡಲು ಮುಂದಾಗಿರುವ ದೊರೆ, ಪಾಕಿಸ್ತಾನದಿಂದ ಸುರಕ್ಷಿತವಾಗಿ ಹೊರತೆರಳಲು ಸಹಾಯ ನೀಡುವುದಾಗಿ ಹೇಳಿದ್ದಾರೆನ್ನಲಾಗಿದೆ. ಒಂಭತ್ತು ವರ್ಷಗಳ ಹಿಂದೆ ನವಾಜ್ ಶರೀಫ್ ಅವರು ರಾಷ್ಟ್ರದಿಂದ ಸುರಕ್ಷಿತರಾಗಿ ತೆರಳಲು ದೊರೆ ಸಹಾಯ ಮಾಡಿದ್ದು, ಈ ಸ್ನೇಹವನ್ನು ಬಳಸಿಕೊಂಡು ಮುಷರಫ್ ರಾಷ್ಟ್ರವನ್ನು ತೊರೆಯಲು ಅವಕಾಶ ಕೋರಿದ್ದಾರೆನ್ನಲಾಗಿದೆ.

ತನ್ನ ಸ್ಥಾನದಲ್ಲಿ ಮುಂದುವರಿದರೆ ಅಥವಾ ಸ್ಥಾನ ತ್ಯಜಿಸಿದರೂ, ತನ್ನ ವಿರುದ್ಧದ ಆರೋಪಗಳ ವಿರುದ್ಧ ಹೋರಾಡಲು ಮುಷರಫ್ ನಿರ್ಧರಿಸಿದ್ದಾರೆ ಎಂದು ಅವರ ಕೌಟುಂಬಿಕ ಮೂಲಗಳು ತಿಳಿಸಿವೆ.
ಮತ್ತಷ್ಟು
ನೇಪಾಳ ಪ್ರಧಾನಿಯಾಗಿ ಪ್ರಚಂಡ ಆಯ್ಕೆ
ಸ್ಥಾನ ತ್ಯಾಗಕ್ಕೆ ಮುಷರಫ್ ನಿರ್ಧಾರ
ಬಗ್ದಾದ್:ಆತ್ಮಾಹುತಿ ದಾಳಿಗೆ 26 ಆಹುತಿ
ನೇಪಾಳ: ಮುಂದಿನ ಪ್ರಧಾನಿಯಾಗಿ ಪ್ರಚಂಡಾ?
ಜಗತ್ತಿನ ಅತಿ ಎತ್ತರದ ಮಹಿಳೆ ನಿಧನ
ಸರ್ವಾಧಿಕಾರದ ವಿರುದ್ಧ ಹೋರಾಟಕ್ಕೆ ಗಿಲಾನಿ ಕರೆ