ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಾಶ್ಮೀರ ಅಶಾಂತಿಯ ಹಿಂದೆ ಐಎಸ್ಐ: ಗ್ರೇರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ ಅಶಾಂತಿಯ ಹಿಂದೆ ಐಎಸ್ಐ: ಗ್ರೇರ್
ಕಾಶ್ಮೀರದ ಅಶಾಂತಿಯ ಹಿಂದೆ ಐಎಸ್ಐ ಕೈವಾಡವಿದೆ ಎಂದು ಅಮೆರಿಕದ ಮುಂಚೂಣಿಯ ಚಿಂತಕರ ಚಿಲುಮೆಯೊಂದು ಹೇಳಿದೆ.

ಕಾಶ್ಮೀರದ ಅಶಾಂತಿಯಯಲ್ಲಿ ಐಎಸ್ಐ ಕೈವಾಡ ಇದೆ ಎಂಬ ಭಾರತದ ಅಭಿಪ್ರಾಯದಲ್ಲಿ ಸ್ವಲ್ಪಮಟ್ಟಿಗೆ ಸತ್ಯ ಇರುವಂತೆ ಕಾಣುತ್ತದೆ ಎಂದು ಅಂತಾರಾಷ್ಟ್ರೀಯ ಶಾಂತಿ ಸಂಘಟನೆಯ ಚಿಂತಕ ಫ್ರೆಡ್ರಿಕ್ ಗ್ರೇರ್ ಹೇಳಿದ್ದಾರೆ.

"ಐಎಸ್ಐ ಕಾಶ್ಮೀರ ಗಲಭೆಯ ಹಿಂದಿದೆ ಎಂದು ಭಾರತವು ಸ್ಪಷ್ಟವಾಗಿ ಹೇಳಿದೆ. ಅವರು ಕಾಶ್ಮೀರದಲ್ಲಿ ವರ್ಷಗಳ ಕಾಲದಿಂದ ಸಮಸ್ಯೆಗೆ ತುಪ್ಪ ಸುರಿಯುತ್ತಿದ್ದಾರೆ. ಮತ್ತೆ ಅಂತಹುದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಲ್ಲಿ ಬಾಹ್ಯಕೈವಾಡವಿದೆ. ಈ ಬಾಹ್ಯ ಕೈವಾಡವು ಕೆಲವು ವಾರಗಳ ಹಿಂದಿನದ್ದಲ್ಲ, ಇದು ದಶಕಗಳ ಕಾಲದ್ದು" ಎಂದು ಗ್ರೇರ್ ಹೇಳಿದ್ದಾರೆ.

ಅಂತೆಯೇ, ಅಫ್ಘಾನಿಸ್ತಾನ ಗಡಿಯಲ್ಲಿ ಐಎಸ್ಐ ಕಾರ್ಯಚರಿಸುತ್ತಿದೆ ಎಂಬುದಕ್ಕೆ ಪುರಾವೆಗಳಿವೆ. ಇತ್ತೀಚೆಗೆ ಕಾಬೂಲಿನಲ್ಲಿ ಭಾರತದ ರಾಯಭಾರಿ ಕಚೇರಿಮೇಲೆ ನಡೆಸಲಾಗಿರುವ ದಾಳಿಯಲ್ಲಿ ಐಎಸ್ಐ ಕೈವಾಡ ಇದೆ ಎಂದು ಹೇಳಲಾಗಿತ್ತು. ಇದು ಐಎಸ್ಐ ನಡೆಸುತ್ತಿರುವ ಮೊದಲ ಕೃತ್ಯವಲ್ಲ ಎಂದು ಅವರು ಹೇಳಿದ್ದಾರೆ.

ಐಎಸ್ಐ ಪ್ರಕ್ಷುಬ್ದ ಸ್ಥಿತಿ ಸೃಷ್ಟಿಸುವಲ್ಲಿ ಪಾಲ್ಗೊಳ್ಳುತ್ತಿದೆ ಎಂದು ಮನವರಿಕೆಯಾಗಿರುವ ಗ್ರೇರ್, ಇದು ದಕ್ಷಿಣ ಏಷ್ಯಾದಲ್ಲಿನ ಶಾಂತಿಗೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ.

ಮುಷರಫ್ ಅವರ ವಾಗ್ದಂಡನೆ ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸಿರುವ ಅವರು, ಇದು ಪಾಕಿಸ್ತಾನದಲ್ಲಿ ಉದ್ವಿಗ್ನ ಸ್ಥಿತಿಯನ್ನು ತಗ್ಗಿಸಬಹುದು ಎಂದು ನುಡಿದರು. ಪಾಕಿಸ್ತಾನದಲ್ಲಿ ಮುಷರಫ್ ಅವರೇ ರಾಜಕೀಯ ಅಸ್ಥಿರತೆ ಎಂದು ವ್ಯಂಗ್ಯವಾಡಿದ ಅವರು, ಮುಷರಫ್ ಪದಚ್ಯುತಿಯು ಪಾಕಿಸ್ತಾನದಲ್ಲಿನ ಆತಂಕ ಸ್ಥಿತಿಯನ್ನು ಸುಧಾರಿಸಬಹುದು ಎಂದು ಹೇಳಿದ್ದಾರೆ.
ಮತ್ತಷ್ಟು
ಅಣುಒಪ್ಪಂದ ಕರಡು ತಿರಸ್ಕರಿಸುವಂತೆ ತಜ್ಞರ ಒತ್ತಾಯ
ಮುಷರಫ್ ಸಹಾಯಕ್ಕೆ ಸೌದಿ ದೊರೆ
ನೇಪಾಳ ಪ್ರಧಾನಿಯಾಗಿ ಪ್ರಚಂಡ ಆಯ್ಕೆ
ಸ್ಥಾನ ತ್ಯಾಗಕ್ಕೆ ಮುಷರಫ್ ನಿರ್ಧಾರ
ಬಗ್ದಾದ್:ಆತ್ಮಾಹುತಿ ದಾಳಿಗೆ 26 ಆಹುತಿ
ನೇಪಾಳ: ಮುಂದಿನ ಪ್ರಧಾನಿಯಾಗಿ ಪ್ರಚಂಡಾ?