ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕದನವಿರಾಮಕ್ಕೆ ಜಾರ್ಜಿಯಾ ಸಹಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕದನವಿರಾಮಕ್ಕೆ ಜಾರ್ಜಿಯಾ ಸಹಿ
ತಿಬಿಲ್ಸಿ: ಜಾರ್ಜಿಯಾ ಅಧ್ಯಕ್ಷ ಮಿಕಾಯಿಲ್ ಸಾಕ್ಶಿವಿಲಿ ಅವರು ಶುಕ್ರವಾರ ರಾತ್ರಿ ರಶ್ಯಾದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿಹಾಕಿದ್ದಾರೆ.

ಜಾರ್ಜಿಯಾಗೆ ಭೇಟಿನೀಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರಶ್ಯಾದ ಆಕ್ರಮಣವು ಪಶ್ಚಿಮಕ್ಕೆ ಭಾರೀ ತೊಡಕಾಗಿದೆ ಎಂದು ಹೇಳಿದ್ದಾರೆ.

ಅಧ್ಯಕ್ಷ ಸಾಕ್ಶಿವಿಲಿ ಅವರು ಕದನವಿರಾಮ ಒಪ್ಪಂದಕ್ಕೆ ಸಹಿಹಾಕಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ ರೈಸ್, ರಶ್ಯಾದ ಎಲ್ಲಾ ಪಡೆಗಳು ತಕ್ಷಣವೇ ಹಿಂತೆಗೆಯಬೇಕು ಎಂದು ನುಡಿದರು.

ರೈಸ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಹಾಜರಾದ ಸಾಕ್ಶಿವಿಲಿ "ತಾನು ಎಂದಿಗೂ ಶರಣಾಗಲಾರೆ" ಎಂದು ನುಡಿದರು. ಮತ್ತು ರಶ್ಯಾ ದಾಳಿಯನ್ನು ಸ್ವಾತಿಸಿರುವುದಕ್ಕೆ ಪಶ್ಚಿಮ ರಾಷ್ಟ್ರಗಳ ವಿರುದ್ಧ ತನ್ನ ಅಸಮಾಧಾನ ಸೂಚಿಸಿದರು.

ಕದನವಿರಾಮ ಒಪ್ಪಂದಕ್ಕೆ ಜಾರ್ಜಿಯಾ ಸಹಿಹಾಕಿದೆ. ಇದು ಜಾರಿಗೆ ಬರಬೇಕು ಮತ್ತು ಈಗಲೇ ಜಾರಿಗೆ ಬರುತ್ತದೆ ಎಂದು ರೈಸ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಭಾವಪರವಶರಾದ ಸಾಕ್ಶಿವಿಲಿ ಇದಕ್ಕಾಗಿ ಪತ್ರಕರ್ತರ ಕ್ಷಮೆಯಾಚಿಸಿದರು. ಭಾವತೀವ್ರತೆಯನ್ನು ನಿಯಂತ್ರಿಸಲು ಆಗುತ್ತಿಲ್ಲ ಎಂದವರು ನುಡಿದರು.

ರಶ್ಯಾದ ದಾಳಿಯಿಂದ ಉಂಟಾಗಿರುವ ಪರಿಣಾಮಗಳ ಕುರಿತು ಚರ್ಚಿಸಲು ಸಮಯ ಒದಗಿ ಬಂದಿದೆ ಎಂದು ರೈಸ್ ನುಡಿದರು. ಇದು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ರಶ್ಯ ಯಾವ ಪಾತ್ರವಹಿಸಲು ನಿಜವಾಗಿಯೂ ಯೋಜಿಸುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮತ್ತಷ್ಟು
ಕಾಶ್ಮೀರ ಅಶಾಂತಿಯ ಹಿಂದೆ ಐಎಸ್ಐ: ಗ್ರೇರ್
ಅಣುಒಪ್ಪಂದ ಕರಡು ತಿರಸ್ಕರಿಸುವಂತೆ ತಜ್ಞರ ಒತ್ತಾಯ
ಮುಷರಫ್ ಸಹಾಯಕ್ಕೆ ಸೌದಿ ದೊರೆ
ನೇಪಾಳ ಪ್ರಧಾನಿಯಾಗಿ ಪ್ರಚಂಡ ಆಯ್ಕೆ
ಸ್ಥಾನ ತ್ಯಾಗಕ್ಕೆ ಮುಷರಫ್ ನಿರ್ಧಾರ
ಬಗ್ದಾದ್:ಆತ್ಮಾಹುತಿ ದಾಳಿಗೆ 26 ಆಹುತಿ