ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಪಾಕಿಸ್ತಾನ ಅಧ್ಯಕ್ಷ ಮುಷರಫ್ ಭವಿಷ್ಯದ ಕುರಿತಾದ ಊಹಾಪೋಹಗಳು ಮುಂದುವರಿದಿವೆ.
ಸುಪ್ರೀಂಕೋರ್ಟಿನಲ್ಲಿ ತನ್ನ ಮೇಲಿನ ದೋಷಾರೋಪಣೆ ಸಂಬಂಧಿಸಿದಂತೆ ಕಾನೂನು ಸಲಹಾಗಾರರನ್ನು ಮುಷರಫ್ ಭೇಟಿಯಾಗಲಿರುವುದಾಗಿ ತಿಳಿದುಬಂದಿದ್ದು, ಆದರೆ, ಮುಷರಫ್ ಅವರಿಗೆ ನೀಡಲಾಗಿರುವ ರಾಜೀನಾಮೆ ಗಡುವು ಮುಗಿಯುತ್ತಾ ಬಂದಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ಹೇಳುತ್ತಾರೆ.
ಅಧಿಕಾರದಿಂದ ಕೆಳಗಿಳಿಯಲು ಮುಷರಫ್ ಅವರಿಗೆ ಪಾಕಿಸ್ತಾನ ಸಮ್ಮಿಶ್ರ ಸರಕಾರವು ನೀಡಿದ್ದ 24 ಗಂಟೆಗಳ ಗಡುವು ರವಿವಾರ ಮುಗಿಯಲಿದೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿ, ಶೀಘ್ರದಲ್ಲೇ ರಾಜೀನಾಮೆ ನೀಡುವಂತೆ ಮುಷರಫ್‌ಗೆ ಒತ್ತಾಯಿಸಿದ್ದಾರೆ.
ಆದರೆ, ಮುಷರಫ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿಲ್ಲ ಎಂದು ವರದಿಗಳು ಹೇಳಿವೆ.
|