ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್ ವಾಗ್ದಂಡನೆ ಪ್ರಕ್ರಿಯೆ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ವಾಗ್ದಂಡನೆ ಪ್ರಕ್ರಿಯೆ ಆರಂಭ
ಇಸ್ಲಾಮಾಬಾದ್: ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ವಾಗ್ದಂಡನಾ ಪ್ರಕ್ರಿಯೆ ಸೋಮವಾರ ಆರಂಭಗೊಳ್ಳಲಿದ್ದು, ಅವರ ವಿರುದ್ಧ 100 ಪುಟಗಳ ಆರೋಪಪಟ್ಟಿಯನ್ನು ಶಾಸನಸಭೆಯಲ್ಲಿ ಮಂಡಿಸಲಾಗುವುದು.

ಸೇನಾ ಕ್ಷಿಪ್ರಕ್ರಾಂತಿಯ ಮೂಲಕ ಆಡಳಿತದ ಚುಕ್ಕಾಣಿಯನ್ನು ಪಡೆದು ಎಂಟು ವರ್ಷಗಳ ಕಾಲ ಪಾಕಿಸ್ತಾನವನ್ನು ತನ್ನ ಮುಷ್ಟಿಯಲ್ಲಿ ಇರಿಸಿಕೊಂಡಿದ್ದ ಮುಷರಫ್ ಅವರಿಗೀಗ ರಾಷ್ಟ್ರದ ತುಂಬ ವೈರಿಗಳೇ ತುಂಬಿದ್ದು, ಅವರ ಪದಚ್ಯುತಿ ಪ್ರಕ್ರಿಯೆಗೆ ಚಾಲನೆ ಲಭಿಸಿದೆ.

ಮುಷರಫ್ ಅವರು ಕ್ಷಿಪ್ರಕ್ರಾಂತಿ ಮೂಲಕ ಆಗಿನ ಪ್ರಧಾನಿ ನವಾಜ್ ಷರೀಫ್ ಅಧಿಕಾರ ಕಸಿದುಕೊಂಡು, ಬಳಿಕ ಅವರನ್ನು ಜೈಲಿನಲ್ಲಿರಿಸಿದ್ದರು. ನಂತರ ಷರೀಫ್ ಸೌದಿ ಅರೇಬಿಯಾಕ್ಕೆ ತೆರಳಿದ್ದು ಇತಿಹಾಸ.

ಆದರೆ, ತನಗೆ ಮುಷರಫ್ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದಿರುವ ಪಿಎಂಎನ್-ಎನ್ ವರಿಷ್ಠ ಷರೀಫ್, ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಮುಷರಫ್ ಎಸಗಿರುವ ಅಪರಾಧಗಳಿಗೆ ಅವರು ಉತ್ತದಾಯಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಒಂದೊಮ್ಮೆ ಮುಷರಫ್ ಸ್ವಯಂ ಸ್ಥಾನ ತ್ಯಾಗಕ್ಕೆ ಮುಂದಾದರೂ, ಅವರನ್ನು ಶಿಕ್ಷಿಸದೆ ಸುರಕ್ಷಿತವಾಗಿ ರಾಷ್ಟ್ರದಿಂದ ಹೊರ ತೆರಳಲು ಅವಕಾಶ ಕಲ್ಪಿಸಕೂಡದು ಎಂದು ಒಂದು ವರ್ಗ ಬಯಸಿದೆ.
ಮತ್ತಷ್ಟು
ಪಾಕ್ ಮುಂದಿನ ಅಧ್ಯಕ್ಷ ಸ್ಥಾನದಲ್ಲಿ ಮಹಿಳೆ?
ಮುಷರಫ್ ರಾಜೀನಾಮೆ ಗಡುವು ಇಂದು ಅಂತ್ಯ
ಮಲೇಶ್ಯ: ಉಪಚುನಾವಣೆಗೆ ಅನ್ವರ್ ನಾಮಪತ್ರ
ಕದನವಿರಾಮಕ್ಕೆ ಜಾರ್ಜಿಯಾ ಸಹಿ
ಕಾಶ್ಮೀರ ಅಶಾಂತಿಯ ಹಿಂದೆ ಐಎಸ್ಐ: ಗ್ರೇರ್
ಅಣುಒಪ್ಪಂದ ಕರಡು ತಿರಸ್ಕರಿಸುವಂತೆ ತಜ್ಞರ ಒತ್ತಾಯ