ಟೆಹ್ರಾನ್: ಸಂಶೋಧನಾ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯ ಉಳ್ಳ ರಾಕೆಟ್‌ನ ಪರೀಕ್ಷಾ ಉಡಾವಣೆಯನ್ನು ಇರಾನ್ ಯಶಸ್ವಿಯಾಗಿ ಮಾಡಿದೆ.
ಸಫಿರ್-ಇ-ಒಮಿದ್(ಶಾಂತಿ ದೂತ) ಎಂಬ ಹೆಸರಿನ ಈ ರಾಕೆಟನ್ನು ಎರಡು ಹಂತದಲ್ಲಿ ಪರೀಕ್ಷಿಸಲಾಗಿದ್ದು, ಹಾರಾಟ ಯಶಸ್ವಿಯಾಗಿದೆ ಎಂದು ರಾಷ್ಟ್ರದ ದೂರದರ್ಶನ ವಾಹಿನಿ ಹೇಳಿದೆ.
ಇರಾನ್ 2005ರಲ್ಲಿ ತನ್ನ ಪ್ರಥಮ ವಾಣಿಜ್ಯ ಉಪಗ್ರಹವನ್ನು ರಶ್ಯಾದೊಂದಿಗಿನ ಜಂಟಿಯೋಜನೆಯಲ್ಲಿ ರಶ್ಯಾ ಉಡ್ಡಯಕದೊಂದಿಗೆ ಹಾರಿ ಬಿಟ್ಟಿತ್ತು. ರಶ್ಯಾವು ಇರಾನ್‌ನ ಪ್ರಮುಖ ಭಾಗೀದಾರನಾಗಿದ್ದು, ಅದಕ್ಕೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಒದಗಿಸುತ್ತಿದೆ.
|