ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್ ರಾಜೀನಾಮೆ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ರಾಜೀನಾಮೆ ಘೋಷಣೆ
ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧ ವಾಗ್ದಂಡನೆಗೆ ಆಡಳಿತಾರೂಢ ಮೈತ್ರಿ ಪಕ್ಷಗಳು ತಯಾರಿ ನಡೆಸುತ್ತಿರುವಂತೆಯೇ, ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮುಷರಫ್ ತನ್ನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ತನ್ನ ಕೊನೆಯ ಭಾಷಣ ಮಾಡಿದ ಮುಷರಫ್ ತನ್ನ ಆಡಳಿತಾವಧಿಯ ಸಾಧನೆಯನ್ನು ಬಿಚ್ಚಿಟ್ಟರು. ಇಂದಿನ ದಿನ ತನಗೆ ಬಹಳ ಪ್ರಮುಖವಾದುದು ಎಂದು ಭಾಷಣ ಆರಂಭಿಸಿದ ಅವರು, ಕಳೆದ ಒಂಭತ್ತು ವರ್ಷಗಳಲ್ಲಿ ರಾಷ್ಟ್ರದ ಹಿತಾಸಕ್ತಿಗಾಗಿ ತಾನು ಕಾರ್ಯವೆಸಗಿದ್ದಾಗಿ ನುಡಿದರು.

ತನ್ನ ವಿರುದ್ಧ ಕೆಲವು ವ್ಯಕ್ತಿಗಳು ಸುಳ್ಳು ಆರೋಪಗಳನ್ನು ಹೊರಿಸಿರುವುದು ದುರದೃಷ್ಟಕರ ಎಂದು ನುಡಿದ ಮುಷ್, "ನನ್ನೆದುರು ಯಾವ ಆರೋಪವೂ ನಿಲ್ಲದು ಮತ್ತು ನಾನು ನನ್ನ ವೈಯಕ್ತಿಕ ಲಾಭಕ್ಕಾಗಿ ಏನನ್ನೂ ಮಾಡಿದ್ದಲ್ಲ" ಎಂದು ಹೇಳಿದರು. ಅಲ್ಲದೆ, ತನ್ನ ವಿರುದ್ಧ ಮಾಡಿರುವ ಆರೋಪವು ದೇಶಕ್ಕೆ ಮಾಡಿರುವ ವಂಚನೆ ಎಂದು ಅವರು ತನ್ನ ಭಾಷಣದಲ್ಲಿ ಹೇಳಿದರು.

ರಾಷ್ಟ್ರೀಯ ಉತ್ಪನ್ನ, ವಿದೇಶಿ ಮೀಸಲು, ಕಂದಾಯ, ವಿನಿಮಯ ದರ, ಉದ್ಯೋಗ ದರಗಳು ತನ್ನ ಕಾಲಾವಧಿಯಲ್ಲಿ ಏರಿದೆ ಎಂದು ನುಡಿದ ಅಧ್ಯಕ್ಷರು, ತನ್ನ ಅವಧಿಯಲ್ಲಿ ರಾಷ್ಟ್ರ ವಿನಾಶದತ್ತ ಸಾಗಿದೆ ಎಂಬುದು ಆಧಾರ ರಹಿತ ಎಂದು ಸಮರ್ಥಿಸಿಕೊಂಡರು.

ಅಧ್ಯಕ್ಷ ಮುಷರಫ್ ಅವರ ಪದಚ್ಯುತಿಗೆ ಮುಂದಾಗಿದ್ದ ಪಾಕಿಸ್ತಾನದ ಆಡಳಿತಾರೂಢ ಮೈತ್ರಿ ಕೂಟವು ಇಂದು ಅವರ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಆರಂಭಕ್ಕೆ ನಿರ್ಧರಿಸಿದ್ದು, 100 ಪುಟಗಳ ಆರೋಪಪಟ್ಟಿ ಸಿದ್ಧಪಡಿಸಿತ್ತು. ಮುಷರಫ್ ಅವರು ಇಂದೇ ರಾಷ್ಟ್ರವನ್ನು ತೊರೆಯಲಿದ್ದಾರೆ ಎಂದು ಊಹಿಸಲಾಗಿದೆ.
ಮತ್ತಷ್ಟು
ನೇಪಾಳ: ಪ್ರಚಂಡ ಪ್ರಮಾಣಕ್ಕೆ ಸಿದ್ಧತೆ
ಇರಾನ್: ಉಪಗ್ರಹವಾಹಕ ರಾಕೆಟ್ ಪರೀಕ್ಷೆ
ಮುಷರಫ್ ವಾಗ್ದಂಡನೆ ಪ್ರಕ್ರಿಯೆ ಆರಂಭ
ಪಾಕ್ ಮುಂದಿನ ಅಧ್ಯಕ್ಷ ಸ್ಥಾನದಲ್ಲಿ ಮಹಿಳೆ?
ಮುಷರಫ್ ರಾಜೀನಾಮೆ ಗಡುವು ಇಂದು ಅಂತ್ಯ
ಮಲೇಶ್ಯ: ಉಪಚುನಾವಣೆಗೆ ಅನ್ವರ್ ನಾಮಪತ್ರ