ಮುಷರಫ್ ಸ್ಥಾನ ತೊರೆದ ಬಳಿಕ, ಅವರ ಮುಂದಿನ ನಿರ್ಧಾರ ಏನು ಎಂಬುದು ಎಲ್ಲರ ಕುತೂಹಲಕಾರಿ ಪ್ರಶ್ನೆ. ಅವರು ಪಾಕಿಸ್ತಾನದಲ್ಲೇ ಮುಂದುವರಿಯುವ ಅಪಾಯಕ್ಕೆ ಒಡ್ಡಿಕೊಳ್ಳಲಿದ್ದಾರೆಯೇ ಅಥವಾ ರಾಷ್ಟ್ರ ತೊರೆಯಲಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟಿವೆ.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮುಷರಫ್ ಅವರು ಸುರಕ್ಷಿತವಾಗಿ ರಾಷ್ಟ್ರ ತೊರೆಯಲು ಅನುಕೂಲ ಕಲ್ಪಿಸಬೇಕೇ ಎಂದು ನಿರ್ಧರಿಸಲು ಆಡಳಿತ ಮಿತ್ರ ಪಕ್ಷಗಳಾದ ಪಿಪಿಪಿಯ ಮುಖ್ಯಸ್ಥ ಅಸಿಫ್ ಅಲಿ ಜರ್ದಾರಿ ಮತ್ತು ಪಿಎಂಎಲ್-ಎನ್‌ನ ಮುಖ್ಯಸ್ಥ ನವಾಜ್ ಶರೀಫ್ ಅವರುಗಳು ಇಂದು ಸಭೆ ಸೇರಲಿದ್ದಾರೆ.
ಮುಷರಫ್ ರಾಜಿನಾಮೆ ಘೋಷಿಸುತ್ತಿರುವಂತೆಯೇ ಉಭಯ ಪಕ್ಷಗಳು ಸುಮಾರು ನಾಲ್ಕು ಗಂಟೆಗಳ ಕಾಲದ ಸುದೀರ್ಘ ಸಭೆ ನಡೆಸಿದರಾದರೂ ಯಾವುದೇ ಅಂತಿಮ ನಿರ್ಣಯಕ್ಕೆ ಬಂದಿರಲಿಲ್ಲ.
ಇಂದಿನ ಸಭೆಯಲ್ಲಿ ಮುಷರಫ್ ಗಡಿಪಾರು ವಿಚಾರದೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪುನರ್‌ನೇಮಕದ ಕುರಿತೂ ಚರ್ಚಿಸಲಾಗುವುದು ಎಂದು ಹೇಳಲಾಗಿದೆ.
|