ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಪ್ರದೇಶದ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಆತ್ಮಾಹುತಿ ಬಾಂಬರ್‌ಗಳು ವಿಫಲ ಪ್ರಯತ್ನ ನಡೆಸಿದ್ದಾರೆ.
ತಮ್ಮ ಸೊಂಟದಲ್ಲಿ ಸ್ಫೋಟಕಗಳನ್ನು ಕಟ್ಟಿಕೊಂಡಿದ್ದ ಆರು ಆಕ್ರಮಣಕಾರಿಗಳು ಶರಣಾಗಿದ್ದಾರೆ. ಸೇನಾ ನೆಲೆಯ ಹೊರಗಡೆ ಆತ್ಮಾಹುತಿ ದಾಳಿ ನಡೆಸಿ 10 ಮಂದಿ ನಾಗರಿಕರು ಹತರಾಗಿ, ಇತರ 13 ಮಂದಿ ಗಾಯಗೊಂಡಿರುವ ಘಟನೆ ನಡೆದಿರುವ ಮರುದಿನವೇ, ಬಾಂಬರ್‌ಗಳು ಮತ್ತೆ ದಾಳಿನಡೆಸಲು ಸನ್ನದ್ಧರಾಗಿದ್ದರು.
ಉಗ್ರರು ಮತ್ತು ಸೇನೆಯ ನಡುವೆ ಕಾದಾಟವು ಮಂಗಳವಾರ ಮುಂಜಾನೆಯ ತನಕವೂ ಮುಂದುವರಿದಿತ್ತು, ದಾಳಿಯಲ್ಲಿ ಅಮೆರಿಕ ಸೇನಾಪಡೆಯಲ್ಲಿ ಯಾವುದೇ ಸಾವು ಸಂಭವಿಸಿರುವ ವರದಿಯಾಗಿಲ್ಲ ಎಂದು ಸೇನಾವಕ್ತಾರರು ಹೇಳಿದ್ದಾರೆ.
ಸೇನಾಶಿಬಿರದೊಳಕ್ಕೆ ಪ್ರವೇಶ ಪಡೆಯಲು ವಿಫಲಾಗಿರುವ ಉಗ್ರರು ಬಳಿಕ ದಾಳಿ ನಡೆಸಿದ್ದಾರೆ. ಈ ಸೇನಾ ನೆಲೆಯು ಪಾಕಿಸ್ತಾನ ಗಡಿಯಿಂದ ಕೆಲವೇ ಮೈಲಿ ದೂರದಲ್ಲಿದೆ.
|