ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಆಸ್ಪತ್ರೆಯಲ್ಲಿ ಸ್ಫೋಟ: 20 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಆಸ್ಪತ್ರೆಯಲ್ಲಿ ಸ್ಫೋಟ: 20 ಸಾವು
ವಾಯುವ್ಯ ಪಾಕಿಸ್ತಾನದ ಆಸ್ಪತ್ರೆಯಲ್ಲಿ ನಡೆಸಲಾಗಿರುವ ಬಾಂಬ್ ಸ್ಫೋಟದಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದು ಇತರ 45 ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ಹೇಳಿದ್ದಾರೆ.

ಇದು ಆತ್ಮಾಹುತಿ ದಾಳಿಯೇ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ, ಆದರೆ ಆಸ್ಪತ್ರೆಯ ಆವರಣದಲ್ಲಿ ಸ್ಫೋಟ ಸಂಭವಿಸಿದೆ, ಇದರಲ್ಲಿ 20 ಮಂದಿ ಸಾವನ್ನಪ್ಪಿರುವುದಾಗಿ ಆರಂಭಿಕ ವರದಿಗಳು ತಿಳಿಸಿವೆ ಎಂದು ಸೈಯದ್ ಮೊಶಿನ್ ಶಾ ಹೇಳಿದ್ದಾರೆ

ಇದು ತುರ್ತುಸ್ಥಿತಿಯಾಗಿದೆ ಎಂದು ಪೊಲೀಸ್ ಅಧಿಕಾರಿ ಹಬೀಬ್ ಖಾನ್ ತಿಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಸ್ಫೋಟ ಸಂಭವಿಸಿದೆ.

ಶಿಯಾ ಪಂಥದ ಧಾರ್ಮಿಕ ಗುರುವಿನ ಬೆಂಬಲಿಗರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಾಂಬ್ ಸ್ಫೋಟಿಸಿದೆ. ಮಂಗಳವಾರ ಮುಂಜಾನೆ ಗುಂಡುದಾಳಿಗೆ ಬಲಿಯಾಗಿರುವ ಧಾರ್ಮಿಕ ನಾಯಕನ ಮೃತ ದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅವರ ಬೆಂಬಲಿಗರು ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದರು.

ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸ್ಥಾನತ್ಯಜಿಸಿದ ಒಂದು ದಿನದ ಬಳಿಕ ಈ ದಾಳಿ ನಡೆಸಲಾಗಿದ್ದು, ರಾಷ್ಟ್ರ ರಾಜಕೀಯದಲ್ಲಿ ಇನ್ನಷ್ಟು ಅಸ್ಥಿರತೆಯನ್ನು ಉಂಟು ಮಾಡಿದೆ.
ಮತ್ತಷ್ಟು
ಅನಿವಾರ್ಯತೆಗೆ ಬಾಗಿದ ಮುಷರಫ್: ಮಾಧ್ಯಮಗಳ ವ್ಯಾಖ್ಯಾನ
ಅಫ್ಘಾನ್: ಅಮೆರಿಕ ನೆಲೆಯ ಮೇಲೆ ಆತ್ಮಾಹುತಿ ದಾಳಿ
ಮೆಕ್ಕಾ ಪ್ರಯಾಣ ಬೆಳೆಸಲಿರುವ ಮುಷರಫ್
ಮುಷ್ ಹಣೆಬರಹ ನಿರ್ಧಾರಕ್ಕೆ ಮೈತ್ರಿಕೂಟ ಸಭೆ
ನೇಪಾಳ ಪ್ರಧಾನಿಯಾಗಿ ಪ್ರಚಂಡ ಪ್ರಮಾಣವಚನ
ಮುಷರಫ್ ಏಳು ಬೀಳುಗಳು