ಇಗೊಯ್ಟಿ: ತಮ್ಮ ರಾಷ್ಟ್ರವು ರಶ್ಯಾದೊಂದಿಗೆ ಕೈದಿಗಳ ವಿನಿಮಯ ಕಾರ್ಯ ಆರಂಭಗೊಳಿಸಿದೆ ಎಂದು ಜಾರ್ಜಿಯಾದ ರಾಷ್ಟ್ರೀಯ ಭದ್ರತಾ ಮಂಡಳಿ ತಿಳಿಸಿದೆ.
ರಶ್ಯಾದ ಎರಡು ಸೇನಾ ಹೆಲಿಕಾಫ್ಟರ್‌ಗಳು ಮಂಗಳವಾರ ಮುಂಜಾನೆ ಜಾರ್ಜಿಯಾದ ಲಗೋಯ್ಟಿ ಪಟ್ಟಣದಲ್ಲಿ ಬಂದಿಳಿದಿದ್ದು ಸ್ಟ್ರೆಚರ್‌ಗಳಲ್ಲಿ ಇಬ್ಬರನ್ನು ಇಳಿಸಿದ್ದು ಇವರನ್ನು ಜಾರ್ಜಿಯಾದ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಳಿಕ ಜಾರ್ಜಿಯಾದ ಅಂಬ್ಯುಲೆನ್ಸ್‌ಗಳು ಇಬ್ಬರನ್ನು ಇಳಿಸಿದ್ದು ಅವರನ್ನು ರಶ್ಯಾದ ಹೆಲಿಕಾಫ್ಟರ್‌ಗಳಿಗೆ ಏರಿಸಿಕೊಳ್ಳಲಾಗಿದೆ.
ಇದು ಇತ್ತೀಚೆಗೆ ನಡೆದ ಯುದ್ಧದ ಕೈದಿಗಳ ವಿನಿಮಯವಾಗಿದೆ ಎಂದು ಜಾರ್ಜಿಯಾದ ಭದ್ರತಾ ಮಂಡಳಿ ಮುಖ್ಯಸ್ಥ ಅಲೆಗ್ಸಾಂಡರ್ ಲೋಮಾಯಿಯಾ ಹೇಳಿದ್ದಾರೆ.
ಆದರೆ ಈ ಪ್ರಕ್ರಿಯೆಯಿಂದ ಪತ್ರಕರ್ತರನ್ನು ಹೊರಗಿರಿಸಲಾಗಿತ್ತು. ಮತ್ತು ಈ ವೇಳೆ ಸ್ಥಳದಲ್ಲಿದ್ದ ಯಾವುದೇ ಅಧಿಕಾರಿಗಳು ಪ್ರತಿಕ್ರಿಯಿಸಲಿಲ್ಲ.
|