ಇಸ್ಲಾಮಾಬಾದ್: ತಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸದೆ ತೆಪ್ಪಗಿರಿ ಎಂದು ಭಾರತ ಪಾಕಿಸ್ತಾನಕ್ಕೆ ಸ್ಪಷ್ಟ ಸೂಚನೆ ನೀಡಿದ್ದರೂ, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಕುರಿತು ಪರಿವೀಕ್ಷಣೆಗೆ ಸಮಿತಿಯೊಂದನ್ನು ನೇಮಿಸಲು ಪಾಕಿಸ್ತಾನ ಸಂಸತ್ತು ಮಗಳವಾರ ಸಮಿತಿಯೊಂದನ್ನು ನೇಮಿಸಿದೆ.
ಕಾಶ್ಮೀರ ಕುರಿತು ವಿಶೇಷ ಸಮಿತಿ ರಚಿಸುವ ಮಸೂದೆಯನ್ನು ಪಿಪಿಪಿ ನಾಯಕ ಹಾಗೂ ಕಾನೂವು ಸಚಿವ ಫಾರೂಕ್ ನಾಯಿಕ್ ಮಂಡಿಸಿದ್ದು, ಅದು ಕೆಳಮನೆಯಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿತು.
ಮುಸೂದೆಯಲ್ಲಿ ಕಾಶ್ಮೀರದಲ್ಲಿ ಜನತೆಯ ಮಾನವ ಹಕ್ಕುಗಳು ಮತ್ತು ಸ್ವಾವಲಂಬನೆಯ ಹಕ್ಕಿಗಾಗಿ ಜಾಗತಿಕ ಅಭಿಪ್ರಾಯ ಒಗ್ಗೂಡಿಸಲು ಸಮಿತಿ ನೇಮಿಸಬೇಕು ಮತ್ತು ಸಮಿತಿಯಲ್ಲಿ ರಾಷ್ಟ್ರೀಯ ಶಾಸನ ಸಭೆಯ ಸಂಸದರು ಒಳಗೊಂಡಿರಬೇಕು ಎಂದು ಹೇಳಲಾಗಿದೆ.
ಸಮಿತಿಯು ಮಾನವ ಹಕ್ಕುಗಳ ಉಲ್ಲಂಘನೆಗಳ ಪರಿವೀಕ್ಷಣೆ ಮಾಡಲಿದೆ ಮತ್ತು ಜಮ್ಮು ಕಾಶ್ಮೀರದ ಜನತೆಯ ಸ್ವಾವಲಂಬನೆಯ ಹಕ್ಕಿನ ಕುರಿತು ಜಾಗತಿಕ ಅಭಿಪ್ರಾಯವನ್ನು ಒಗ್ಗೂಡಿಸಲಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಅಲ್ಲದೆ ಸಮಿತಿಯು ರಾಷ್ಟ್ರದೊಳಗೆ ಮತ್ತು ರಾಷ್ಟ್ರದ ಹೊರಗೆ ಕಾಶ್ಮೀರದ ಕುರಿತು ಜಾಗೃತಿಯನ್ನೂ ಮೂಡಿಸಲಿದೆ ಮತ್ತು ಕಾಶ್ಮೀರದ ಜನತೆಗೆ ರಾಜಕೀಯ, ನೈತಿಕ, ರಾಜತಾಂತ್ರಿಕ ಬೆಂಬಲವನ್ನು ಒದಗಿಸಲಿದೆ ಎಂಬ ಅಂಶ ಮಸೂದೆಯಲ್ಲಿ ಒಳಗೊಂಡಿದೆ.
|