ಅಫ್ಘಾನಿಸ್ತಾನ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಬುಧವಾರ ಕಾಬೂಲ್‌ನಲ್ಲಿ ಬಂದಿಳಿದಿದ್ದಾರೆ.
ಅಂತಾರಾಷ್ಟ್ರೀಯ ಪಡೆಗಳ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಫ್ರೆಂಚ್ ಪಡೆಯ 10ಮಂದಿ ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಫ್ರೆಂಚ್ ಪಡೆಗೆ ಬೆಂಬಲ ಸೂಚ್ಯಾರ್ಥವಾಗಿ ಅವರು ಈ ಪ್ರವಾಸ ಕೈಗೊಂಡಿದ್ದಾರೆ.
ಫ್ರಾನ್ಸ್ ರಕ್ಷಣಾ ಸಚಿವ ಹಾರ್ವೆ ಮೊರಿನ್ ಮತ್ತು ವಿದೇಶಾಂಗ ಸಚಿವ ಬರ್ನಾರ್ಡ್ ಕೊಚ್‌ನರ್ ಅವರುಗಳು ಸರ್ಕೋಜಿ ಜತೆಗಿದ್ದಾರೆ.
ಇವರು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಜತೆಗೂಡಿ, ದಾಳಿಯ ವೇಳೆಗೆ ಗಾಯಗೊಂಡಿರುವ 21 ಮಂದಿ ಫ್ರೆಂಚ್ ಪಡೆಯ ಸೈನಿಕರಲ್ಲಿ ಕೆಲವು ಮಂದಿಯನ್ನು ಭೇಟಿಯಾಗಲಿದ್ದಾರೆ.
ಮಂಗಳವಾರ ತಡರಾತ್ರಿ ತನ್ನ ಪ್ರವಾಸವನ್ನು ಆರಂಭಿಸುವುದಕ್ಕೆ ಮುಂಚಿತವಾಗಿ ಸರ್ಕೋಜಿ, ತನ್ನ ಈ ಪ್ರವಾಸವು, ಫ್ರಾನ್ಸ್ ನಿಮ್ಮೊಂದಿಗಿದೆ ಎಂದು ಫ್ರೆಂಚ್ ಪಡೆಗಳಿಗೆ ಸಾರುವ ಸಲುವಾಗಿ ಈ ಪ್ರವಾಸ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.
|