ಅಲ್ಜೀರಿಯಾ: ರಾಜಧಾನಿ ಅಲ್ಜೀರಿಯಾಸ್‌ನ ಪೂರ್ವಕ್ಕೆ 60 ಕಿ.ಮೀ ದೂರದಲ್ಲಿ ಪೊಲೀಸ್ ಶಾಲೆಯಂದರ ಮೇಲೆ ಉಗ್ರರು ನಡೆಸಿರುವ ದಾಳಿಯಲ್ಲಿ 43 ಮಂದಿ ಸಾವನ್ನಪ್ಪಿದ್ದು, ಇತರ 38 ಮಂದಿ ಗಾಯಗೊಂಡಿದ್ದಾರೆ.
ಸತ್ತವರಲ್ಲಿ ನಾಗರಿಕರು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದ್ದು, ಭಾರೀ ಭದ್ರತಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ದಾಳಿಕೋರರು ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಶಾಲೆಯ ಮುಖ್ಯಗೇಟಿನ ಮೂಲಕ ನುಗ್ಗಿಸಿದ್ದು, ದಾಳಿ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವೇಳೆಗೆ ಪ್ರವೇಶ ಪರೀಕ್ಷೆಯೊಂದನ್ನು ಬರೆಯಲು ಬಂದಿದ್ದ ಅಭ್ಯರ್ಥಿಗಳು ಹೊರಗಡೆ ಕಾಯುತ್ತಿದ್ದರು.
ಸತ್ತವರ ಸಂಖ್ಯೆ ದೃಢಪಟ್ಟಿಲ್ಲ ಎಂದು ಅಲ್ಜಿರಿಯಾ ಸಚಿವಾಲದ ಹೇಳಿಕೆ ತಿಳಿಸಿದೆ. ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆಗಳನ್ನು ಹೊತ್ತುಕೊಂಡಿಲ್ಲ.
|