ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಆ.22ರಂದು ಜಾರ್ಜಿಯಾದಿಂದ ರಶ್ಯಾ ಹಿಂತೆಗೆತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆ.22ರಂದು ಜಾರ್ಜಿಯಾದಿಂದ ರಶ್ಯಾ ಹಿಂತೆಗೆತ
ರಶ್ಯಾವು ತನ್ನ ಪಡೆಗಳನ್ನು ಶುಕ್ರವಾರ ಜಾರ್ಜಿಯಾದಿಂದ ಹಿಂತೆಗೆದುಕೊಳ್ಳಲಿದೆ ಎಂದು ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಹೇಳಿದ್ದಾರೆ.

ಫ್ರೆಂಚ್ ಅಧ್ಯಕ್ಷ ಹಾಗೂ ಯೂರೋಪ್ ಒಕ್ಕೂಟದ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರೊಂದಿಗೆ ನಡೆಸಿರುವ ದೂರವಾಣಿ ಮಾತುಕತೆಯಲ್ಲಿ ರಶ್ಯಾವು ತನ್ನೆಲ್ಲಾ 500 ಪಡೆಗಳನ್ನು ಗುರುವಾರ ಮತ್ತು ಶುಕ್ರವಾರ ಹಿಂತೆಗೆಯಲಿದೆ ಎಂದು ಹೇಳಿದ್ದಾರೆ.

ರಶ್ಯಾವು ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಲ್ಲಿ ವಿಳಂಬಿಸುತ್ತಿರುವುದಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ಟೀಕೆ ವ್ಯಕ್ತಪಡಿಸಿದ್ದು, ರಶ್ಯಾ ಮತ್ತು ನ್ಯಾಟೋ ನಡುವೆ ಉದ್ವಿಗ್ನತೆ ಉರಿಯಲಾರಂಭಿಸಿತ್ತು.

ದಕ್ಷಿಣ ಒಸ್ಸೆಟಿಯಾದ ಮೇಲೆ ಮರು ನಿಯಂತ್ರಣ ಸಾಧಿಸುವ ಜಾರ್ಜಿಯಾದ ಪ್ರಯತ್ನವನ್ನು ಹಿಮ್ಮೆಟ್ಟಿಸಲು ಆಗಸ್ಟ್ 8ರಂದು ರಶ್ಯಾ ತನ್ನ ಪಡೆಗಳನ್ನು ಕಳುಹಿಸಿತ್ತು. ಜಾರ್ಜಿಯಾ ಮತ್ತು ರಶ್ಯಾ ಗಡಿ ಪ್ರದೇಶದಲ್ಲಿರುವ ಪುಟ್ಟ ಗುಡ್ಡಗಾಡು ಪ್ರದೇಶವು ಮಾಸ್ಕೋ ಬೆಂಬಲಿತ ಪ್ರತ್ಯೇಕತಾವಾಗಿಗಳ ನಿಯಂತ್ರಣದಲ್ಲಿದೆ.

ಫ್ರೆಂಚ್ ಸಂಧಾನಿತ ಕದನವಿರಾಮ ಒಪ್ಪಂದಕ್ಕೆ ಬರುವ ಮುನ್ನ, ರಶ್ಯಾ ಜಾರ್ಜಿಯಾ ಸೇನೆಯನ್ನು ಹಿಮ್ಮೆಟ್ಟಿಸಿ ದೊಡ್ಡ ಪ್ರದೇಶವನ್ನು ವಶಪಡಿಸಿಕೊಂಡಿತ್ತು.
ಮತ್ತಷ್ಟು
ಅಲ್ಜೀರಿಯಾ ಬಾಂಬ್ ದಾಳಿಗೆ 43 ಆಹುತಿ
ಅಫ್ಘಾನ್‌ ಪ್ರವಾಸದಲ್ಲಿ ಸರ್ಕೋಜಿ
ಕಾಶ್ಮೀರದಲ್ಲಿ ಮಾನವಹಕ್ಕುಗಳ ವೀಕ್ಷಣೆಗೆ ಪಾಕ್ ಸಮಿತಿ
ಜಾರ್ಜಿಯಾ-ರಶ್ಯಾ ಕೈದಿಗಳ ವಿನಿಮಯ ಆರಂಭ
ಪಾಕ್ ಆಸ್ಪತ್ರೆಯಲ್ಲಿ ಸ್ಫೋಟ: 20 ಸಾವು
ಅನಿವಾರ್ಯತೆಗೆ ಬಾಗಿದ ಮುಷರಫ್: ಮಾಧ್ಯಮಗಳ ವ್ಯಾಖ್ಯಾನ