ಬ್ರಿಟನ್ನಿನ ರಾಣಿ ಮತ್ತು ರಾಜುಕುಮಾರ ಚಾರ್ಲ್ಸ್ ಸೇರಿದಂತೆ ರಾಜಮನೆತನದ ಪ್ರಮುಖ ವ್ಯಕ್ತಿಗಳನ್ನು ಕೊಲೆಗೈಯುವ ಸಂಚು ಹೂಡಿದ್ದ ಇಸ್ಲಾಮಿಕ್ ಭಯೋತ್ಪಾದನಾ ಸಂಚೊಂದನ್ನು ಬ್ರಿಟನ್ ಪೊಲೀಸರು ಬಯಲಿಗೆಳೆದಿದ್ದಾರೆ.
ಈ ಭಯೋತ್ಪಾದನಾ ಸಂಘಟನೆಯು ಬಾಂಬ್ ತಯಾರಿಕೆ ಹಾಗೂ ಸೊಂಟದಲ್ಲಿ ಬಾಂಬ್ ಇರಿಸುವ ಕವಚವನ್ನು ತಯಾರಿಸುತ್ತಿತ್ತು. ಪೊಲೀರಿಂದ ಬಂಧನಕ್ಕೀಡಾಗಿರುವರ ಬಳಿ ಲಭಿಸಿರುವ ಪಟ್ಟಿಯಿಂದ ಉಗ್ರರ ಯೋಜನೆ ಬೆಳಕಿಗೆ ಬಂದಿದೆ. ಬಂಧಿತರು ಬಳಿ ರಾಣಿ, ಎಡಿನ್‌ಬರ್ಗ್ ರಾಜ, ವೇಲ್ಸ್ ರಾಜಕುಮಾರ, ಯಾರ್ಕ್ ರಾಜ, ಮತ್ತು ರಾಜಕುಮಾರಿಯರ ವಿವರಗಳನ್ನು ಬಂಧಿತರು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ಬಳಿ ಸ್ಫೋಟಕಗಳು, ವಿಷ ಮತ್ತು ಲಂಡನ್ನಿನ ಪ್ರಮುಖ ಜಾಗಗಳು ಹಾಗೂ ರಾಜಮನೆತನದ ನಿವಾಸಗಳ ವಿವರಗಳಿದ್ದವು ಎಂಬುದಾಗಿ ಭಯೋತ್ಪಾದನಾ ವಿರೋಧಿ ಪಡೆಯೊಂದು ಹೇಳಿರುವುದಾಗಿ ಲಂಡನ್ ದೈನಿಕ ಉಲ್ಲೇಖಿಸಿದೆ.
ರಾಜಮನೆತನದ ಅಧಿಕೃತ ನಿವಾಸಗಳು ತೆರೆಯುವ ಸಮಯ, ಚಿತ್ರಗಳು, ನಕಾಶೆಗಳು ಮತ್ತು ವಿವರಗಳು, ಸಂಸತ್, ಟವರ್ ಬ್ರಿಜ್ ಮುಂತಾದ ಸ್ಥಳಗಳ ವಿವರಗಳು, ಅಮೆರಿಕದ ವಾಶಿಂಗ್ಟನ್ ಸ್ಮಾರಕ ಮತ್ತು ವಿಶ್ವಬ್ಯಾಂಕಿನ ವಿವರಗಳ ವೀಡಿಯೋ ಬಂಧಿತರ ಬಳಿಇದ್ದವು ಎಂದು ಪತ್ತೇದಾರಿ ವಿಭಾಗದ ಮುಖ್ಯಸ್ಥ ಜಾನ್ ಪರ್ಕಿನ್ಸನ್ ಹೇಳಿದ್ದಾರೆ. ಅಲ್ಲದೆ, ಇವರ ಬಳಿ ಉಗ್ರವಾದಿ ಧೋರಣೆಯ ವಸ್ತುಗಳು ಮತ್ತು ಭಯೋತ್ಪಾಕ ಹಿಂಸಾಚಾರವನ್ನು ನಡೆಸಲು ಬಳಸುವ ವಸ್ತುಗಳು ಪತ್ತೆಯಾಗಿವೆ ಎಂದೂ ಅವರು ಹೇಳಿದ್ದಾರೆ.
|