ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮ್ಯಾಡ್ರಿಡ್ ಭೀಕರ ವಿಮಾನ ಅಪಘಾತ; ಕನಿಷ್ಠ 153ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮ್ಯಾಡ್ರಿಡ್ ಭೀಕರ ವಿಮಾನ ಅಪಘಾತ; ಕನಿಷ್ಠ 153ಸಾವು
ಮ್ಯಾಡ್ರಿಡ್ ವಿಮಾನ ನಿಲ್ದಾಣದಲ್ಲಿ ಸ್ಪೇನ್ ಏರ್‌ಲೈನ್ ವಿಮಾನವೊಂದು ಟೇಕಾಪ್ ಮಾಡುತ್ತಿರುವ ವೇಳೆಗೆ ಬೆಂಕಿ ಹತ್ತಿಕೊಂಡಿದ್ದು ಉಂಟಾದ ಅಪಘಾತದಲ್ಲಿ ಕನಿಷ್ಠ 153 ಮಂದಿ ಸಾವನ್ನಪ್ಪಿದ್ದಾರೆ.

ಕ್ಯಾನರಿ ದ್ವೀಪಕ್ಕೆ ತೆರಳುತ್ತಿದ್ದ ಈ ವಿಮಾನದಲ್ಲಿ 173 ಮಂದಿ ಪ್ರಯಾಣಿಸುತ್ತಿದ್ದು, ಕೇವಲ 19 ಮಂದಿ ಮಾತ್ರ ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ ಎಂದು ಸ್ಪೇನ್‌ನ ತುರ್ತು ಪರಿಹಾರ ಅಧಿಕಾರಿ ಹೇಳಿದ್ದಾರೆ.

ಬುಧವಾರ ಈ ಅಪಘಾತ ಸಂಭವಿಸಿದ್ದು, ಅಪಘಾತ ಸ್ಥಳಕ್ಕೆ ತೆರಳಿರುವ ಸಮುರ್ ಮುನಿಸಿಪಲ್ ಸಹಾಯ ಸೇವಾ ಅಧಿಕಾರಿಯೊಬ್ಬರು ಸಾವಿನ ಸಂಖ್ಯೆಯ ವಿವರ ನೀಡಿದ್ದಾರೆ.

ಸ್ಪೇನ್‌ನ ಈ ಜೆಕೆ5022 ವಿಮಾನವು ಕ್ಯಾನರಿ ದ್ವೀಪದ ಜನಪ್ರಿಯ ರಜಾಕಾಲದ ಪ್ರವಾಸ ತಾಣ ಲಾಸ್ ಪಾಮಾಸ್‌ಗೆ ತೆರಳುತ್ತಿತ್ತು.

ಬರಜಾಸ್ ವಿಮಾನ ನಿಲ್ದಾಣದಲ್ಲಿ ಈ ಅಪಘಾತ ಸಂಭವಿಸಿದ್ದು, ದಟ್ಟ ಬಿಳಿಯ ಹೊಗೆ ಕಾಣಿಸಿಕೊಂಡಿತು. ಹೆಲಿಕಾಪ್ಟರ್‌ಗಳು ಮತ್ತು ಟ್ರಕ್‌ಗಳಲ್ಲಿ ವಿಮಾನದ ಮೇಲೆ ನೀರು ಸುರಿಯಲಾಯಿತು. ಅಪಘಾತಕ್ಕೀಡಾದ ವಿಮಾನವು ನಾಲ್ಕನೆ ಟರ್ಮಿನಲ್‌ನ ರನ್‌ವೇಯಲ್ಲಿ ಉರುಳಿ ಬಿದ್ದಿತ್ತು. ವಿಮಾನ ಸಿಬ್ಬಂದಿಗಳು ವಿಮಾನದೊಳಕ್ಕೆ ಸಿಲುಕಿದ್ದವರನ್ನು ಮತ್ತು ಸಾವಿಗೀಡಾದವರ ಮೃತ ದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪರಿಹಾರ ಏಜೆನ್ಸಿ ಅಧಿಕಾರಿ ಹೇಳಿದ್ದಾರೆ.

ವಿಮಾನದಲ್ಲಿ ಸಿಲುಕಿದ್ದ ದೇಹಗಳು ವಿಪರೀತ ಬಿಸಿಯಾಗಿದ್ದು, ಅವುಗಳನ್ನು ಮುಟ್ಟಲೂ ಆಗುತ್ತಿರಲಿಲ್ಲ ಎಂದು ತಿಳಿಸಿರುವ ಪೊಲೀಸರು, ಅಪಘಾತಕ್ಕೀಡಾದ ವಿಮಾನದ ಅವಶೇಷವು ವಿಮಾನದ ಮೂಲರೂಪದಲ್ಲಿ ಇರದಷ್ಟು ಹಾನಿಯಾಗಿತ್ತು ಎಂದು ಹೇಳಿದ್ದಾರೆ.
ಮತ್ತಷ್ಟು
ಬ್ರಿಟನ್: ರಾಣಿ, ರಾಜಕುಮಾರ ಹತ್ಯಾ ಸಂಚು ಬಯಲು
ಪಾಕ್ ತೊರೆಯುವ ವರದಿಗಳನ್ನು ತಳ್ಳಿಹಾಕಿದ ಮುಷ್
ಆ.22ರಂದು ಜಾರ್ಜಿಯಾದಿಂದ ರಶ್ಯಾ ಹಿಂತೆಗೆತ
ಅಲ್ಜೀರಿಯಾ ಬಾಂಬ್ ದಾಳಿಗೆ 43 ಆಹುತಿ
ಅಫ್ಘಾನ್‌ ಪ್ರವಾಸದಲ್ಲಿ ಸರ್ಕೋಜಿ
ಕಾಶ್ಮೀರದಲ್ಲಿ ಮಾನವಹಕ್ಕುಗಳ ವೀಕ್ಷಣೆಗೆ ಪಾಕ್ ಸಮಿತಿ