ರೈಲು ದುರಂತದಲ್ಲಿ 11 ಮಂದಿ ಸಾವನ್ನಪ್ಪಿ ಹಲವಾರು ಪ್ರಯಾಣಿಕರು ಗಾಯಗೊಂಡ ಘಟನೆಗೆ ಕಾರಣಿಭೂತನಾದ ಆರೋಪಿಗೆ ಯಾವುದೇ ಪೆರೋಲ್ ಅವಕಾಶ ನೀಡದೆ ನ್ಯಾಯಾಲಯವೊಂದು 11 ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವ ಕುರಿತು ಲಾಸ್‌ಏಂಜಲೀಸ್‌ನಿಂದ ವರದಿಯಾಗಿದೆ.
29ರ ಹರೆಯದ ಜುವಾನ್ ಮ್ಯಾನುವಲ್ ಅಲ್ವಾರೇಜ್ ಅವರ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ಎರಡು ತಿಂಗಳುಗಳ ಕಾಲ ನಡೆದು ಮರಣದಂಡನೆಗೆ ಬದಲಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತಮ್ಮ ಮುಂದಿನ ಜೀವನ ಅಂತ್ಯದವರೆಗೆ ಜೈಲಿನಲ್ಲಿ ಕಳೆಯಲಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಆರೋಪಿ ಪರ ವಕೀಲರು ವಾದ ಮಂಡಿಸಿ ಅಲ್ವಾರೇಜ್ ರೈಲುಹಳಿಗಳ ಮೇಲೆ ತಮ್ಮ ಕಾರನ್ನು ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ಆತ್ಮಹತ್ಯೆಯ ವಿಚಾರ ಬದಲಾದ ನಂತರ ಕಾರನ್ನು ರೈಲುಹಳಿಯಿಂದ ತೆಗೆಯಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲವಾದ್ದರಿಂದ ರೈಲು ದುರಂತಕ್ಕೆ ಕಾರಣವಾಯಿತು ಎಂದು ವಿವರಿಸಿದರು.
ಅಲ್ವಾರೇಜ್ ಕಾರಿಗೆ ಗುದ್ದಿದ ಲಾಸ್ ಏಂಜಲೀಸ್ ರೈಲು ಅಪಘಾತಕ್ಕೀಡಾಗಿ 11 ಮಂದಿ ಸ್ಥಳದಲ್ಲಿ ಸಾವನ್ನಪ್ಪಿ 180ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿದ್ದರು.
|