ಕಳೆದ ಮೂರು ದಿನಗಳಿಂದ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯೊಂದಿಗೆ ನಡೆದ ಮಾತುಕತೆ ಸಕಾರಾತ್ಮಕವಾಗಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಮುಖ್ಯ ಪರಿವೀಕ್ಷಕ ಒಲಿ ಹೈನೊನೆನ್ ಮತ್ತು ಇರಾನ್ ಅಣುಶಕ್ತಿ ಆಯೋಗದ ಮುಖ್ಯಸ್ಥ ಘೊಲಮ್ -ರೆಝಾ ಅಕಾಝಾದೆಹ್ ಅವರು ಹೇಳಿಕೆಯೊಂದನ್ನು ನೀಡಿ, ಉತ್ತಮ ವಾತಾವರಣದಲ್ಲಿ ಸಕಾರಾತ್ಮಕ ಮಾತುಕತೆಗಳು ನಡೆದಿವೆ. ಇರಾನ್ ರಾಯಭಾರಿ ಅಲಿ ಅಸ್ಗರ್ ಸೊಲ್ತಾನೈ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಮತ್ತು ಇರಾನ್ ಅಣುಶಕ್ತಿ ಆಯೋಗದ ಮಧ್ಯೆ ತಾಂತ್ರಿಕ ಸಹಕಾರ ಸಂಧಾನದ ಮಾತುಕತೆಗಳು ಮುಂದುವರಿಯಲಿವೆ ಎಂದು ಇರಾನ್ ರಾಯಭಾರಿ ಸೊಲ್ತಾನೈ ತಿಳಿಸಿದ್ದಾರೆ.
ಮಾತುಕತೆಗಳು ಸಂಪೂರ್ಣ ತಾಂತ್ರಿಕವಾಗಿದ್ದು ಯಾವುದೇ ರಾಜಕೀಯ ಆಧಾರಿತವಾಗಿರಲಿಲ್ಲ. ಯುರೇನಿಯಂ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅದರ ಬದಲಾಗಿ ಜಗತ್ತಿನ ಬಲಾಡ್ಯ ರಾಷ್ಟ್ರಗಳು ಘೋಷಿಸಿರುವ ಅನುದಾನ ಮತ್ತು ಸಹಕಾರವನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
|